ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಾರಕಕ್ಕೆ ಏರುತ್ತಿದ್ದು ಅದರಲ್ಲು ಮಂಡ್ಯದ ರಾಜಕೀಯ ಕಣ ರಣರಂಗವಾಗಿ ಮಾರ್ಪಟ್ಟಿದೆ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಅವರ ಪರ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಳೆದ ನಾಲ್ಕು ದಿನಗಳಿಂದ ಪ್ರಚಾರ ಮಾಡುತ್ತಿದ್ದಾರೆ.
ಇಷ್ಟು ದಿನ ದರ್ಶನ್, ಯಶ್, ಪ್ರೇಮ್ ಮಾತ್ರ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಇವರ ಜೊತೆಗೆ ಅಂಬರೀಷ್ ಆಪ್ತ ಗೆಳೆಯರಾದ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಬರುತ್ತಾರಂತೆ ಅನ್ನೋ ಸುದ್ದಿ ಇಡೀ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿ ಹರಿದಾಡಿತ್ತು.
ಆದ್ರೆ ಇದೀಗ ಈ ಎಲ್ಲಾ ಸುದ್ಧಿಗಳಿಗೆ ಸುಮಲತಾ ಅಂಬರೀಶ್ ಅವರು ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ನನ್ನ ಜೊತೆ ಸಿನಿಮಾ ಸ್ಟಾರ್ ಗಳಾಗಿ ಬರುತ್ತಿಲ್ಲ ಬದಲಾಗಿ ಮಂಡ್ಯದ ಮೇಲಿರುವ, ಮಂಡ್ಯದ ಜನರ ಮೇಲಿರುವ ಪ್ರೀತಿ ಮತ್ತು ಅಂಬರೀಶ್ ಮೇಲೆ ಅವರು ಇಟ್ಟಿರೋ ಅಭಿಮಾನದಿಂದಾಗಿ ನನ್ನ ಪರವಾಗಿ ಬಂದು ಪ್ರಚಾರವನ್ನು ಮಾಡುತ್ತಿದ್ದಾರೆ. ಆದ್ರೆ ನಾನು ರಜಿನಿಕಾಂತ್ ಮತ್ತು ಚಿರಂಜೀವಿ ಅವರು ನನ್ನ ಪರ ಪ್ರಚಾರಕ್ಕೆ ಮಂಡ್ಯಕ್ಕೆ ಬರಬೇಕು ಕರೆದಿಲ್ಲ ಹಾಗೂ ಬರಲಿ ಅಂತಾ ನಿರೀಕ್ಷೆ ಕೂಡಾ ಮಾಡಲ್ಲ ಎಂದು ಹೇಳುವ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.