ಸ್ಟಾರ್ ವಾರ್ ಗೆ ಮಂಡ್ಯ ಲೋಕಸಭಾ ಚುನಾವಣಾ ಕಣ ಸಜ್ಜಾಗಿದೆ.ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುತ್ತಿದ್ದಾರೆ.
ಆದರೆ, ಪಕ್ಷೇತರಾಗಿಯಾದರೂ ಕಣಕ್ಕೆ ಇಳೀತೀನಿ ಎಂದು ಸ್ಪೃರ್ಧೆಗೆ ಸಿದ್ಧರಾಗಿದ್ದಾರೆ ಸುಮಲತಾ. ಹೀಗಾಗಿ ನಿಖಿಲ್ ಗೆ ವಿರೋಧ ವ್ಯಕ್ತವಾಗುತ್ತಿದ್ದು, ಸುಮಲತಾಗೆ ಭಾರೀ ಬೆಂಬಲ ಸಿಗುತ್ತದೆ.
‘ಗಂಡ ಸತ್ತು ಇನ್ನು 2 ತಿಂಗಳು ಆಗಿಲ್ಲ..ಸುಮಲತಾಗೆ ರಾಜಕೀಯ ಬೇಕಿತ್ತಾ?’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ರು,ಈಗ ರಾಜಕೀಯದಲ್ಲಿ ಬಣ್ಣ ಹಚ್ಚಲು ಬಂದಿದ್ದಾರೆ’ ಎಂಬ ಸಚಿವ ಹೆಚ್ .ಡಿ ರೇವಣ್ಣ ಅವರ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.ಇದು ಜೆಡಿಎಸ್ ಗೆ ಭಾರೀ ದೊಡ್ಡ ಪೆಟ್ಟು ಕೂಡ ಕೊಡಲಿದೆ.
ಕಾಂಗ್ರೆಸ್ , ಜೆಡಿಎಸ್ ನಾಯಕರು ಸುಮಲತಾ ವಿರುದ್ಧವಾಗಿ ಮಾತನಾಡುತ್ತಿದ್ದರೆ ಬಿಜೆಪಿ ನಾಯಕರು ಸುಮಲತಾ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿರುವ ಸಂಸದೆ ಶೋಭ ಕರಂದ್ಲಾಜೆ, ಮಂಗಳೂರು: ಸುಮಲತಾ ಅವರು ಕನ್ನಡದ ಮಗಳು, ಕನ್ನಡದ ಸೊಸೆ. ಕಳೆದ ಮೂರು ದಶಕಗಳಲ್ಲಿ ಇಲ್ಲೇ ನೆಲೆಸಿ, ನನ್ನ ರಾಜ್ಯ ಅಂತ ಇಲ್ಲಿದ್ದಾರೆ. ಇನ್ನು ಅಂಬರೀಶ್ ಸತ್ತಾಗ ರೇವಣ್ಣ ನಡೆದುಕೊಂಡ ರೀತಿ ಹಾಗಾದ್ರೆ ಮೊಸಳೆ ಕಣ್ಣೀರಾ? ಗಂಡ ಸತ್ತ ಹೆಣ್ಮಕ್ಕಳು ಆಚೆ ಬರಬಾರದಾ? ರಾಜಕೀಯಕ್ಕೆ ಬರಬಾರದಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸುಮಲತಾ ಪರ ಬ್ಯಾಟಿಂಗ್ ಗೆ ಇಳಿದ ಬಿಜೆಪಿ ಲೀಡರ್…!
Date: