ಸುಮಲತಾ ಬಗ್ಗೆ ಅಪಪ್ರಚಾರ ಮಾಡ್ತಿರೋರಿಗೆ ಯಶ್ ಕೊಟ್ಟ ಖಡಕ್ ಉತ್ತರ ಕೇಳಿ

Date:

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆಯಿಂದ ಪ್ರಚಾರ ಆರಂಭಿಸಿದ್ದಾರೆ. ಇಂದಿನಿಂದ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಶುರು ಮಾಡಿದ್ದಾರೆ.
ಇಂದು ಶ್ರೀರಂಗಪಟ್ಟಣ ತಾಲೂಕಿನ ಊರಮಾರಲ ಕಸಲಗೆರೆ ಗ್ರಾಮದಲ್ಲಿ ಕಹಳೆ ಊದುವ ಮೂಲಕ ಪ್ರಚಾರಕ್ಕಿಳಿದ ಯಶ್, ಸುಮಲತಾ ವಿರುದ್ಧ ಮಾತನಾಡಿದವರಿಗೆ ತಮ್ಮದೇ ದಾಟಿಯಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ. ಸುಮಲತಾ ಅವರು ನಿಮ್ಮೂರಿನ ಸೊಸೆ . ಆ ವ್ಯಕ್ತಿ ಮಾತನಾಡುವುದು ಸರಿನಾ? ಮದುವೆಯಾದ ಮೇಲೆ ಆ ಹೆಣ್ಣು ಗಂಡನ ಮನೆಯವರಾಗುತ್ತಾಳೆ ಎನ್ನುವ ಮೂಲಕ ಯಶ್‌ ಸುಮಲತಾ ಗೌಡರಲ್ಲ ಎಂದ ಶಿವರಾಮೇಗೌಡರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ನಾನು ಏನೇ ಆಗಿದ್ದರೂ, ನನ್ನ ಕಷ್ಟ ಕಾಲದಲ್ಲಿ ಅವರನ್ನು ನೆನೆಸಿಕೊಳ್ಳುವುದು ನಮ್ಮ ವ್ಯಕ್ತಿತ್ವ. ಅಂಬರೀಷ್ ಅಣ್ಣ ನಮಗೇ ಬಹಳ ಮುಖ್ಯವಾದ ವ್ಯಕ್ತಿ. ನನ್ನ ಸೇರಿದಂತೆ ಹಲವರಿಗೆ ಬೇಕಾದಷ್ಟು ಮಾಡಿದ್ದಾರೆ. ಸುಮಲತಾ ಈ ಊರಿನ ಸೊಸೆಯಾಗಿದ್ದರೂ ಕೂಡ ಕೆಲವರು ಅಲ್ಲಿಯವರು, ಇಲ್ಲಿಯವರು ಎನ್ನುತ್ತಿದ್ದಾರೆ. ಅಂಬರೀಷ್​ ಅವರದ್ದು ನಾಟಕದ ಪ್ರೀತಿಯಲ್ಲ. ಮಂಡ್ಯ ಅಂದ್ರೆ ಅಂಬರೀಷಣ್ಣಂಗೆ ಅತಿ ಹೆಚ್ಚು ಪ್ರೀತಿ ಇತ್ತು. ಇದು ಸ್ವಾಭಿಮಾನದ ಪ್ರಶ್ನೆ. ಕನ್‌ಫ್ಯೂಸ್ ಆಗಲಿ ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಜನ ಕನ್‌ಫ್ಯೂಸ್‌ ಆಗುವಷ್ಟು ದಡ್ಡರಲ್ಲ. ಮಾತನಾಡುವವರಿಗೆ ಗೆಲ್ಲಿಸುವ ಮೂಲಕ ಉತ್ತರ ನೀಡಿ ಎಂದು ಸುಮಲತಾ ಪರ ಪ್ರಚಾರ ಮಾಡಿದರು.

Share post:

Subscribe

spot_imgspot_img

Popular

More like this
Related

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...

ಕೋಲಾರದಲ್ಲಿ ಕುಖ್ಯಾತ ಅಂತರರಾಜ್ಯ ಮನೆ ಕಳ್ಳಿಯರ ಬಂಧನ

ಕೋಲಾರದಲ್ಲಿ ಕುಖ್ಯಾತ ಅಂತರರಾಜ್ಯ ಮನೆ ಕಳ್ಳಿಯರ ಬಂಧನಕೋಲಾರ:ಕುಖ್ಯಾತ ಅಂತರರಾಜ್ಯ ಮನೆ ಕಳ್ಳಿಯರನ್ನು...

ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ..

ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ..ಮುಖ್ಯಮಂತ್ರಿ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರಭ್ರಷ್ಟಾಚಾರ: ಸಿ.ಟಿ.ರವಿ ಆರೋಪ ಬೆಂಗಳೂರು:...