ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ರಾಜ್ಯದಲ್ಲಿ ಸದ್ಯ ಎಲ್ಲಾ ಕ್ಷೇತ್ರಗಳಿಗಿಂತ ಮಂಡ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದೆ. ಇವರ ಎದುರು ಕಣಕ್ಕಿಳಿಯಲು ರೆಡಿಯಾಗಿರುವವರೂ ಸಾಮಾನ್ಯರಲ್ಲ.. ಸುಮಲತಾ ಅಂಬರೀಶ್ ಎನ್ನುವ ಶಕ್ತಿ..!
ಒಂದುಕಡೆಯಿಂದ ಅಂಬರೀಶ್ ಎನ್ನುವ ಹೆಸರಿನ ಬಲ… ಇನ್ನೊಂದು ಕಡೆಯಿಂದ ತನ್ನದೇ ಆದ ವರ್ಚಸ್ಸು…ಮತ್ತೊಂದು ಕಡೆಯಿಂದ ನಟ ದರ್ಶನ್ ಅವರ ಬೆಂಬಲದ ‘ಗಜ’ಬಲ.. ಇವೆಲ್ಲದರ ಜೊತೆ ಅಂಬಿ ಅಭಿಮಾನಿಗಳು, ತಮ್ಮ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳು.. ಜೊತೆ ಜೊತೆಗೆ ಈಗಷ್ಟೇ ಸಿನಿರಂಗ ಪ್ರವೇಶಿಸುತ್ತಿರುವ ಮಗ ಅಭಿಷೇಕ್ ಅವರ ಅಭಿಮಾನಿಗಳ ಬೆಂಬಲ ಸುಮಲತಾ ಅವರಿಗೆ ಶ್ರೀರಕ್ಷೆಯಾಗಿದೆ.
ಪಕ್ಷೇತರರಾಗಿಯಾದರೂ ಸ್ಪರ್ಧಿಸಿ ನಾವು ಬೆಂಬಲ ನೀಡುತ್ತೇವೆ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಕೈ ಕೊಟ್ಟಿದ್ದಕ್ಕೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಲು ಡಿಸೈಡ್ ಮಾಡಿದ್ದಾರೆ. ಆದರೆ, ಇದೀಗ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದು, ಕುತೂಹಲ ಮನೆ ಮಾಡುವಂತೆ ಮಾಡಿದೆ.
ಬಿಜೆಪಿ ಮುಖಂಡ, 2014ರ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಬಿ. ಶಿವಲಿಂಗಯ್ಯ ಅವರನ್ನು ಭೇಟಿ ಮಾಡಿ 1 ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ್ದಾರೆ. ಹೀಗಾಗಿ ಸುಮಲತಾ ಬಿಜೆಪಿಗೆ ಸೇರಿ, ಮೈತ್ರಿಗೆ ಶಾಕ್ ಕೊಡೋ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಸುಮಲತಾ ಬಿಜೆಪಿ ಸೇರ್ತಾರೆ ಎಂದು ಹೇಳ್ತಿದೆ ಈ ರಹಸ್ಯ ಭೇಟಿ.!?
Date: