ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಮಾವೇಶದ ಇಂಚಿಂಚೂ ಮಾಹಿತಿ ಪಡೆದುಕೊಂಡಿದ್ದಾರೆ.
ಸುಮಲತಾ ಅವರು ನಾಮಪತ್ರ ಸಲ್ಲಿಸಲು ಹೋದಾಗ ಎಷ್ಟು ಮಂದಿ ಅಭಿಮಾನಿಗಳಿದ್ರು? ಸಮಾವೇಶದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ರು? ಸಮಾವೇಶದ ವೇದಿಕೆಯಲ್ಲಿ ಸುಮಲತಾ ಅಂಬರೀಶ್ ಬೆನ್ನಿಗೆ ನಿಂತು ಯಾರೆಲ್ಲ ಮಾತನ್ನಾಡಿದರು? ಸ್ಯಾಂಡಲ್ವುಡ್, ಸುಮಲತಾ ಅಂಬರೀಶ್ರ ಜೊತೆಗಿದೆಯಾ ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಚಿಂತನೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ,
ನಮ್ಮ ಪಕ್ಷದ ಶಾಸಕ ಸತೀಶ್ ರೆಡ್ಡಿ ಇಂದೇ ಮಂಡ್ಯಕ್ಕೆ ಹೋಗಿದ್ದೇಕೆ? ನಮ್ಮ ಹೈಕಮಾಂಡ್ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಯನ್ನೇ ಕಣಕ್ಕಿಳಿಸೋಣ ಎಂದು ಹೇಳಿದೆ. ಹೀಗಿರುವಾಗ ಸತೀಶ್ ರೆಡ್ಡಿ ಮಂಡ್ಯಕ್ಕೆ ಹೋಗಿ ಮಾಡಿದ್ದೇನು? ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಮನವನ್ನು ಮತ್ತೊಮ್ಮೆ ಒಲಿಸಲು ಸಾಧ್ಯವಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಯಡಿಯೂರಪ್ಪ ಅವರನ್ನ ಕಾಡತೊಡಗಿದೆ.
ಈ ಮಧ್ಯೆ ಹೈಕಮಾಂಡ್ ನಾಯಕರ ಮನವೊಲಿಸಿದ್ದೇ ಅದ್ರೆ ನೇರವಾಗಿ ಸುಮಲತಾ ಅಂಬರೀಶ್ಗೆ ಬೆಂಬಲ ಸೂಚಿಸಬಹುದು ಎಂಬುದರ ಬಗ್ಗೆಯೂ ಯಡಿಯೂರಪ್ಪ ಆಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.