ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿಯ ಪ್ರತಿನಿಧಿ ನಿಖಿಲ್ ಕುಮಾರ್ ಸ್ವಾಮಿ ಅವರು ಸಹ ಸ್ಪರ್ಧೆ ಮಾಡಿದ್ದಾರೆ.
ನಿಖಿಲ್ ಮತ್ತು ಸುಮಲತಾ ಅವರ ನಡುವಿನ ಫೈಟ್ ಇದು. ಇಲ್ಲಿ ಮಗ ನಿಖಿಲ್ ಅವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅಖಾಡಕ್ಕೆ ಇಳಿದಿದ್ದಾರೆ.
ಸಿನಿಮಾ ರೀತಿಯಲ್ಲಿ ಮೂವರು ಸುಮಲತಾ ಸ್ಪರ್ಧೆ ಮಾಡಿದ್ದಾರೆ.
ಸುಮಲತಾ ಮಂಜೇಗೌಡ, ಸುಮಲತಾ ಸಿದ್ದೇಗೌಡ ಮತ್ತು ಸುಮಲತಾ ದರ್ಶನ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಸುಮಲತಾ ಮಂಜೇಗೌಡ ಅವರ ಪತಿ ಮಂಜೇಗೌಡ ನಟ ದರ್ಶನ್ ಅವರ ಅಭಿಮಾನಿ.
ನನಗೆ ಗೊತ್ತಿಲ್ಲದೆ ನಾಮಪತ್ರ ಸಲ್ಲಿಸಿದ್ದಾಳೆ. ನಾನು ದರ್ಶನ್ ಅವರ ಪತ್ನಿ. ನಂಗೆ ರಾಜಕೀಯ ಗೊತ್ತಿಲ್ಲ. ನಾನು ನಾಳೆ ಅವಳಿಂದ ನಾಮಪತ್ರ ವಾಪಸ್ಸು ಪಡೆಸುತ್ತೇನೆ ಎಂದಿದ್ದಾರೆ ಮಂಜೇಗೌಡ.