ನವದೆಹಲಿ : ‘ನಂಬಿಯೊ’ ಎಂಬ ಸಂಸ್ಥೆ ಜಾಗತಿಕ ಮಾಹಿತಿ ಮೂಲಗಳನ್ನು ಆಧರಿಸಿ ಜಗತ್ತಿನ ಸುರಕ್ಷಿತ ನಗರಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ನಮ್ಮ ಮಂಗಳೂರು ಕೂಡ ಸ್ಥಾನ ಪಡೆದಿದ್ದು, ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಹೆಮ್ಮೆಯ ನಗರವಾಗಿದೆ.
ನಂಬಿಯೋ ಬಿಡುಗಡೆ ಮಾಡಿರುವ ವಿಶ್ವದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು 37ನೇ ಸ್ಥಾನ ಪಡೆದಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.
ಅಪರಾಧ ಪ್ರಮಾಣ. ಆರೋಗ್ಯ ರಕ್ಷಣೆಯ ಗುಣಮಟ್ಟ ಸಹಿತ ನಾನಾ ರೀತಿಯ ಅಂಕಿ – ಅAಶದ ಆಧಾರದಲ್ಲಿ ನಂಬಿಯೋ ಈ ಸೂಚ್ಯಾಂಕ ಸಿದ್ಧಪಡಿಸಿದೆ.
ಅಪರಾಧ ಸೂಚ್ಯಂಕದಲ್ಲಿ ಅತ್ಯಂತ ಕನಿಷ್ಟ ಪ್ರಮಾಣ ದಾಖಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಅಬುಧಾಬಿ 88.67 ಸುರಕ್ಷಾ ಸೂಚ್ಯಂಕದೊAದಿಗೆ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಶಾರ್ಜಾ 5ನೇ ಸ್ಥಾನದಲ್ಲಿ, ದುಬೈ 7ನೇ ಸ್ಥಾನದಲ್ಲಿದೆ. ಉಪಖಂಡದಲ್ಲಿ ಮಂಗಳೂರು 37 ನೇ ಸ್ಥಾನ, ಇಸ್ಲಮಾಬಾದ್ 74 ನೇ ಸ್ಥಾನ ಪಡೆದಿದೆ ಎಂದು ವರದಿಯಾಗಿದೆ.