ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನಿ ಸಮ್ಮಿಲನ ಎಂಬ ಹೆಸರಲ್ಲಿ ಬೃಹತ್ ಸಮಾವೇಶ ನಡೆಸಿದರು. ಹಿರಿಯ ನಟ ದೊಡ್ಡಣ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ ಮತ್ತಿತರರು ಸಾಥ್ ನೀಡಿದ್ದರು.
ಸಮಾವೇಶದಲ್ಲಿ ಮಾತನಾಡಿದ ಸುಮಲತಾ ಅವರು ಸ್ವಾಭಿಮಾನದ ಭಿಕ್ಷೆ ನೀಡಿ ಎಂದು ಸೆರಗು ಹಿಡಿದು ಮತ ಕೇಳಿದರು. ಅಂಬರೀಶ್ ಅವರ ಅಗಲಿಕೆಯಿಂದ ನೋವಿನಲ್ಲಿದ್ದೆ. ಮಂಡ್ಯ ಜನ ನನ್ನ ನೋವನ್ನು ಹೋಗಲಾಡಿಸಿದ್ದೀರಿ. ನಾನು ಮಂಡ್ಯದ ಜನರಲ್ಲಿ ದೇವರನ್ನು ಕಂಡಿದ್ದೇನೆ ಎಂದರು.
ಅಂತ್ಯಕ್ರಿಯೆ ರಾಜಕಾರಣ ಶುರುಮಾಡಿದ್ದಾರೆ. ಅಂಬರೀಶ್ ಹೋದಾಗ ಮಂಡ್ಯಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಬಸ್ ವ್ಯವಸ್ಥೆ ಮಾಡುತ್ತೇನೆ ಮಂಡ್ಯ ಜನಕ್ಕೆ ಎಂದಿದ್ದರು. ಆಗ ಅಲ್ಲಿದ್ದ ಮಂಡ್ಯದವರೊಬ್ಬರು ಬಸ್ ಗೆ ನೀವು ದುಡ್ ಕೊಡಬೇಕ. ಅವರನ್ನು ಕೊನೇಸಲ ಅಲ್ಲಿಗೆ ಕರೆದುಕೊಂಡು ಬನ್ನಿ ಎಂದಿದ್ದರು. ಜನ ಒತ್ತಾಯಿಸಿದ್ದಕ್ಕೆ ಸಿಎಂ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದರು.
ನಾನು ಜನರ ಕಣ್ಣೀರು ಒರೆಸುತ್ತೇನೆ. ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡರು.
ಸೆರಗು ಹಿಡಿದು ಮತ ಕೇಳಿದ ಸುಮಲತಾ..!
Date: