ಸೈಟ್, ಚಿನ್ನದ ಹೆಸರಲ್ಲಿ ನಟನಿಗೆ ವಂಚನೆ: ಗುರೂಜಿ ವಿರುದ್ಧ ದೂರು ದಾಖಲು

Date:

ಬೆಂಗಳೂರು: ಜ್ಯೋತಿಷ್ಯ ಹೇಳೋ ಗುರೂಜಿ ವಿರುದ್ಧ ಹಿರಿಯ ನಟ ವಂಚನೆ ಕೇಸ್ ದಾಖಲಿಸಿದ್ದಾರೆ. ಗೋಲ್ಡ್ , ದುಬೈ ಟಿಕೇಟ್ , ಸೈಟ್ ಕೊಡುಸ್ತಿನಿ ಎಂದು ವಂಚಿಸಿದ್ದಾರೆಂದು ಗುರೂಜಿ ಹಾಗು ಆತನ ಪತ್ನಿ ವಿರುದ್ಧ ಕಿರುತೆರೆ ಹಾಗು ಸ್ಯಾಂಡಲ್ ವುಡ್ ಹಿರಿಯ ನಟ ರವಿಕಿರಣ್ ದೂರು ನೀಡಿದ್ದಾರೆ. ನವೀನ್ ಭಾಗ್ಯಶ್ರೀ ಗುರೂಜಿ ವಿರುದ್ಧ 4 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿದೆ.

ತನ್ನ ಅನಾಥಾಶ್ರಮಕ್ಕೆ ರೇಷನ್ ಕೊಡಿಸಿ ಎಂದು ನಟನ ಬಳಿ ಗುರೂಜಿ ಬಂದಿದ್ದಾರೆ.
ಈ ವೇಳೆ 2500 ರೂಪಾಯಿ ಗುರೂಜಿ ಅಕೌಂಟ್ ಗೆ ರವಿಕಿರಣ್ ಗೂಗಲ್ ಪೇ ಮಾಡಿದ್ದಾರೆ. ಸ್ವಲ್ಪ ದಿನದ ಬಳಿಕ ದುಬೈನಲ್ಲಿ ಪ್ರೋಗ್ರಾಂ ಇದೆ ನೀವೇ ಚೀಫ್ ಗೆಸ್ಟ್ .ಹೋದರೆ ಹಣ ಕೊಡ್ತಾರೆ ಅಂತ ಗುರೂಜಿ ಕರೆ ಮಾಡಿದ್ದಾರೆ. ಇದಕ್ಕೆ ಒಪ್ಪಿ ಟಿಕೇಟ್ ಮಾಡಿಸಿಕೊಡಿ ಎಂದು ರವಿಕಿರಣ್ ಹೇಳಿದ್ದಾರೆ. ಅದಕ್ಕೂ ಹಣ ಪಡೆದಿದ್ದ ಗುರೂಜಿ ವೀಸಾ ಹಾಗು ಟಿಕೇಟ್ ಗೆ 42 ಸಾವಿರ ಹಣ ಹಾಕಿಸಿಕೊಂಡಿದ್ರಂತೆ.

ನಂತರ ಅಲ್ಲಿನ ಖರ್ಚಿಗೆ ಅಲ್ಲಿನ ಹಣ ದಿರಾಂ ಖರೀದಿಗೆಂದು ಮತ್ತೆ ಹಣ ಹಾಕಿಸಿಕೊಂಡು ನಂತರ ಟಿಕೇಟ್ ಕ್ಯಾನ್ಸಲ್ ಆಗಿದೆ ಎಂದು ಮತ್ತೆ ಹಣ ಹಾಕಿಸಿಕೊಂಡಿದ್ದನಂತೆ. ಇದೇ ವೇಳೆ ಸೈಟ್ ಮಾಡಿಸಿಕೊಡ್ತಿನಿ ಎಂದು ಹಣ ಪಡೆದಿದ್ದನಂತೆ. ದುಬೈನಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡುಸ್ತಿನಿ ಅಂತ ಗುರೂಜಿ ಹಂತಹಂತವಾಗಿ 4 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿ ಯಾವುದನ್ನೂ ಮಾಡಿಸಿಕೊಟ್ಟಿಲ್ಲ ಎಂದು ದೂರು ನೀಡಿದ್ದಾರೆ. ಹಾಗು ಇದರಲ್ಲಿ ಗುರೂಜಿಯ ಪತ್ನಿ ಚೈತ್ರಾ ಎಂಬಾಕೆಯೂ ಭಾಗಿಯಾಗಿದ್ದಾಳೆಂದು ದೂರು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ರವಿಕಿರಣ್ ದೂರಿನ ಹಿನ್ನೆಲೆ ಗುರೂಜಿ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...