‘ಸೈಲೆಂಟ್​ ಹಾರ್ಟ್​ ಅಟ್ಯಾಕ್​ ‘ವಿರುದ್ಧ ಹೋರಾಡಿದ 15ರ ಪೋರ..! ಇದೇನಿದು ಇಂಟ್ರೆಸ್ಟಿಂಗ್ ಸ್ಟೋರಿ

Date:

ಆಕಾಶ್ ಮನೋಜ್, 15 ವರ್ಷ ವಯಸ್ಸಿನ ಹುಡುಗ. ತಮಿಳುನಾಡು ಮೂಲದ ಆಕಾಶ್ ಅದೆಷ್ಟೋ ಜನರ ಜೀವ ಉಳಿಸಬಲ್ಲ ಸಾಧನವೊಂದನ್ನು ಕಂಡುಹಿಡಿದಿದ್ದಾರೆ. ಮನೋಜ್ “ ಸೈಲೆಂಟ್ ಹಾರ್ಟ್ ಅಟ್ಯಾಕ್” ಅನ್ನು ಪತ್ತೆ ಹಚ್ಚಬಲ್ಲ ಡಿವೈಸ್ ಒಂದನ್ನು ಅಭಿವೃದ್ಧಿ ಮಾಡಿದ್ದಾನೆ. ಈ ಡಿವೈಸ್ ಮೂಲಕ ಆಕಾಶ್ ಹಲವರ ಜೀವ ಉಳಿಸಬಲ್ಲ ಪ್ರಯಾಣವನ್ನು ಆರಂಭಿಸಿದ್ದಾರೆ.

ಆಕಾಶ್ ಮನೋಜ್ ಅಜ್ಜ ಕೂಡ ಸೈಲೆಂಟ್ ಹಾರ್ಟ್ ಅಟ್ಯಾಕ್ನಿಂದ ಪದೇ ಪದೇ ಬಳಲುತ್ತಿದ್ದರು. ಇದು ಆಕಾಶ್ಗೆ ಹೊಸ ಡಿವೈಸ್ ಒಂದನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಯಿತು. ಆಕಾಶ್ ಚಿಕ್ಕವಯಸ್ಸಿನಿಂದಲೇ ಮೆಡಿಕಲ್ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು.
ನೋಡಿ, ಮನೋಜ್, ಎಂಟನೇ ತರಗತಿಯಿಂದಲೇ ಮೆಡಿಕಲ್ ವಿಷಯಗಳನ್ನು ತಮಾಷೆಗಾಗಿ ಓದುತ್ತಿದ್ದರು. ಹೊಸೂರಿನಿಂದ ಒಂದು ಗಂಟೆ ಪ್ರಯಾಣ ಮಾಡಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಗ್ರಂಥಾಲಯಕ್ಕೆ ಪದೇ ಪದೇ ಭೇಟಿ ನೀಡಿ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು.
ಆಕಾಶ್ ದೇಹಕ್ಕೆ ದುಷ್ಪರಿಣಾಮವಿಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಪತ್ತೆ ಹಚ್ಚಬಲ್ಲ ಡಿವೈಸ್ ಕಂಡುಹಿಡಿದಿದ್ದಾರೆ. ಈ ಡಿವೈಸ್ ದೇಹದ ರಕ್ತದಲ್ಲಿನ ಪ್ರೊಟೀನ್, FABPS ಅನ್ನು ಕಂಡುಹಿಡಿಯುತ್ತದೆ. ಈ ಡಿವೈಸ್ ಅನ್ನು ಮೊಣಕೈ ಅಥವಾ ಕಿವಿಯ ಹಿಂಭಾಗದಲ್ಲಿ ಇಟ್ಟುಕೊಳ್ಳಬಹುದು. ಈ ಮೂಲಕ ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಪತ್ತೆ ಹಚ್ಚಬಹುದು.
FABPS ರಕ್ತದಲ್ಲಿ ಇರುವ ಅತ್ಯಂತ ಚಿಕ್ಕ ಪ್ರೋಟಿನ್ ಕಣ. ಇದು ನೆಗೆಟಿವ್ ಅಂಶಗಳನ್ನು ಹೊಂದಿರುವುದರಿಂದ ಪಾಸಿಟಿವ್ ಅಂಶಗಳನ್ನು ಆಕರ್ಷಿಸುತ್ತಿದೆ. ಆದ್ರೆ ನಾನು ಅಭಿವೃದ್ಧಿ ಪಡಿಸಿರುವ ಡಿವೈಸ್ ಮೂಲಕ ಅದನ್ನು ಕಂಡುಹಿಡಿಯಬಹುದು ಎನ್ನುತ್ತಾರೆ ಡಿವೈಸ್ ಕಂಡುಹಿಡಿದ – ಆಕಾಶ್


ಆಕಾಶ್ ರಾಷ್ಟ್ರಪತಿ ಭವನದಲ್ಲಿ ಇನ್ನೋವೇಶನ್ಸ್ ಸ್ಕೋಲಾರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದು, ಇತ್ತೀಚೆಗೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಅವರಿಂದಲೂ ಶಭಾಷ್ ಗಿರಿ ಪಡೆದುಕೊಂಡು ಬಂದಿದ್ದಾರೆ.
ತಾವು ತಯಾರಿಸುವ ಸಾಧನದ ಮೂಲಕ ಹಲವರ ಪ್ರಾಣ ಉಳಿಯಬಹುದು ಅನ್ನುವ ನಂಬಿಕೆ ಆಕಾಶ್ಗಿದೆ. ಅಷ್ಟೇ ಅಲ್ಲ ಗ್ರಾಮೀಣ ಭಾಗದ ಜನರಿಗೆ ಇದರಿಂದ ಸಾಕಷ್ಟು ಉಪಯೋಗ ಆಗುತ್ತದೆ ಅನ್ನೋ ವಿಶ್ವಾಸವೂ ಈ ಚಿಕ್ಕ ಹುಡುಗನಿಗಿದೆ. ಆಕಾಶ್ ಕಂಡುಹಿಡಿದಿರುವ ಸಾಧನಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.
ಭವಿಷ್ಯದಲ್ಲಿ ಆಕಾಶ್ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಪದವಿ ಪಡೆಯುವ ಕನಸು ಕೂಡ ಕಾಣುತ್ತಿದ್ದಾರೆ. ಅತ್ಯಂತ ಚಿಕ್ಕವಯಸ್ಸಿನಲ್ಲೇ ಆಕಾಶ್ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...