ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ 4ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ವಿಶ್ವದ 41ನೇ ಶ್ರೇಯಾಂಕಿತ ಲಕ್ಷ್ಯ ಸೇನ್ ಅವರು ಭಾನುವಾರ ತಡರಾತ್ರಿ 56 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ಸ್ ಹಣಾಹಣಿಯಲ್ಲಿ ಬ್ರೆಜಿಲ್‌ನ ಯಗೋರ್ ಕೊಯೆಲ್ಹೋ ಅವರ ವಿರುದ್ಧ 18-21, 21-18, 21-19 ಅಂತರದಲ್ಲಿ ಗೆದ್ದು ಸ್ಕಾಟೀಷ್ ಪ್ರಶಸ್ತಿಗೆ ಭಾಜನರಾದರು.