ಸ್ಕೂಲ್ ಬಸ್ ಗೆ ಮಿನಿ ಕ್ಯಾಂಟರ್ ಡಿಕ್ಕಿ: ಶಾಲಾ ವಾಹನ ಪಲ್ಟಿ – ತಪ್ಪಿದ ದುರಂತ
ಗದಗ: ಇಂದಿನಿಂದ ರಾಜ್ಯದಲ್ಲಿ ಶಾಲಾ ಆರಂಭಗೊಳ್ಳುತ್ತಿದ್ದು, ನಗರದ R.K.ನಗರ ಬಳಿಯ ಅಂಡರ್ಪಾಸ್ನಲ್ಲಿ ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿಯಾಗಿರುವಂತಹ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ಕರೆತರಲು ಹೊರಟಿದ್ದಾಗ ಘಟನೆ ಸಂಭವಿಸಿದ್ದು, ಹೀಗಾಗಿ ಭಾರೀ ಅನಾಹುತ ತಪ್ಪಿದೆ. ಶ್ರೀಪಾರ್ಶ್ವನಾಥ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೂಲ್ ಬಸ್ಗೆ ಮಿನಿ ಕ್ಯಾಂಟರ್ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಶಾಲಾ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.