ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ‘A50’ ಮತ್ತು ‘A30’ ಫೋನ್‌ಗಳು ಸೇಲ್‌ಗೆ ಸಿದ್ಧ.! ಬೆಲೆ ಎಷ್ಟು ಗೊತ್ತಾ?

Date:

ಇತ್ತೀಚಿಗೆ ಗ್ಯಾಲ್ಯಾಕ್ಸಿ ಎಂ10, ಎಂ20 ಮತ್ತು ಎಂ30, ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಭಾರೀ ಶಾಕ್ ನೀಡಿದ್ದ ಸ್ಯಾಮ್‌ಸಂಗ್‌ ಕಂಪನಿಯು ಇದೀಗ ಮತ್ತೆ ಚೀನಾ ಕಂಪನಿಗಳು ಹೌಹಾರುವಂತೆ ಮಾಡಿದೆ. ಹೌದು, ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ‘ಗ್ಯಾಲ್ಯಾಕ್ಸಿ A30’ ಮತ್ತು ‘ಗ್ಯಾಲ್ಯಾಕ್ಸಿ A50’ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿದೆ.

samsung

ಸ್ಯಾಮ್ಸ್‌ಸಂಗ್ ಕಂಪನಿಯ ಹೊಸ ‘ಗ್ಯಾಲ್ಯಾಕ್ಸಿ A30’ ಮತ್ತು ‘ಗ್ಯಾಲ್ಯಾಕ್ಸಿ A50’ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಸೇಲ್ ಆರಂಭಿಸಿವೆ. ಜನಪ್ರಿಯ ಇ ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳೊಂದಿಗೆ, ಸ್ಯಾಮ್‌ಸಂಗ್ ಇ-ಶಾಪ್ ಜಾಲತಾಣದಲ್ಲಿಯೂ ಸಹ ದೊರೆಯಲಿವೆ. ಈ ಫೋನ್‌ಗಳನ್ನು ಇತ್ತೀಚಿಗೆ ಮುಕ್ತಾಯವಾದ ‘ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ 2019’ ಮೇಳದಲ್ಲಿ ಪ್ರದರ್ಶಿಸಲಾಗಿತ್ತು.

samsung

ಭಾರತದಲ್ಲಿ ‘ಗ್ಯಾಲ್ಯಾಕ್ಸಿ ಎ50’ 4GB RAM ಮತ್ತು 64GB ವೇರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯು 19,990ರೂ.ಗಳು ಮತ್ತು 6GB RAM ಮತ್ತು 64GB ವೇರಿಯಂಟ್‌ ಬೆಲೆಯು 22,990ರೂ.ಗಳು ಆಗಿರಲಿದೆ.ಹಾಗೇ ‘ಗ್ಯಾಲ್ಯಾಕ್ಸಿ ಎ30’ ಸ್ಮಾರ್ಟ್‌ಫೋನ್ ಬೆಲೆಯು 16,990ರೂ.ಗಳು ಆಗಿರಲಿದೆ ಎನ್ನಲಾಗಿದೆ. ಹಾಗಾದರೇ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಪೋನ್‌ಗಳು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

'ಗ್ಯಾಲ್ಯಾಕ್ಸಿ ಎ50' ಡಿಸ್‌ಪ್ಲೇ

‘ಗ್ಯಾಲ್ಯಾಕ್ಸಿ ಎ50’ ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ 1080×2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಿದೆ.

'ಗ್ಯಾಲ್ಯಾಕ್ಸಿ ಎ50' ಪ್ರೊಸೆಸರ್

‘ಗ್ಯಾಲ್ಯಾಕ್ಸಿ ಎ50’ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 9610 SoC ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, 4GB RAM ಮತ್ತು 64GB ಹಾಗೂ 6GB RAM ಮತ್ತು 64GB ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿವೆ. ಎರಡು ವೇರಿಯಂಟ್‌ ಮಾದರಿಗಳಲ್ಲಿಯೂ ಬಾಹ್ಯಾ ಸಂಗ್ರಹಕ್ಕೆ 64GB ನೀಡಲಾಗಿದೆ.

'ಗ್ಯಾಲ್ಯಾಕ್ಸಿ ಎ50' ಕ್ಯಾಮೆರಾ

‘ಗ್ಯಾಲ್ಯಾಕ್ಸಿ ಎ50’ ಕ್ಯಾಮೆರಾ

ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, 25MP+5MP+8MP ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿದ್ದು, ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.

'ಗ್ಯಾಲ್ಯಾಕ್ಸಿ ಎ50' ಬ್ಯಾಟರಿ

‘ಗ್ಯಾಲ್ಯಾಕ್ಸಿ ಎ50’ ಬ್ಯಾಟರಿ

ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಸುಮಾರು ಎರಡು ದಿನಗಳ ಕಾಲ ಬಾಳಕೆ ಬರಲಿದೆ. ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ.

'ಗ್ಯಾಲ್ಯಾಕ್ಸಿ ಎ30' ಡಿಸ್‌ಪ್ಲೇ

‘ಗ್ಯಾಲ್ಯಾಕ್ಸಿ ಎ30’ ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ30 ಸ್ಮಾರ್ಟ್‌ಫೋನ್ ಸಹ 1080×2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಿದೆ.

'ಗ್ಯಾಲ್ಯಾಕ್ಸಿ ಎ30' ಪ್ರೊಸೆಸರ್

‘ಗ್ಯಾಲ್ಯಾಕ್ಸಿ ಎ30’ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎ30 ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 7904 SoC ಪ್ರೊಸೆಸರ್‌ ಅನ್ನು ಹೊಂದಿದ್ದು, 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು 512GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

'ಗ್ಯಾಲ್ಯಾಕ್ಸಿ ಎ30' ಕ್ಯಾಮೆರಾ

‘ಗ್ಯಾಲ್ಯಾಕ್ಸಿ ಎ30’ ಕ್ಯಾಮೆರಾ

ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, 16 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿವೆ. ಮುಂಭಾಗದಲ್ಲಿ ಫಿಕ್ಸಡ್‌ ಫೋಕಲ್ f/2.0 ಲೆನ್ಸ್‌ನೊಂದಿಗೆ 25 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

'ಗ್ಯಾಲ್ಯಾಕ್ಸಿ ಎ30' ಬ್ಯಾಟರಿ

‘ಗ್ಯಾಲ್ಯಾಕ್ಸಿ ಎ30’ ಬ್ಯಾಟರಿ

ಈ ಸ್ಮಾರ್ಟ್‌ಫೋನಿನಲ್ಲಿಯೂ ಸಹ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಸುಮಾರು ಎರಡು ದಿನಗಳ ಕಾಲ ಬಾಳಕೆ ಬರಲಿದೆ. ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...