ಸ್ವರ್ಣ ಬೇಟೆಯಾಡಿದ ಸ್ವಪ್ನ ಕಹಾನಿ ನಿಮಗೆ ಸ್ಫೂರ್ತಿ..!

Date:

ಸ್ವಪ್ನಾ ಬರ್ಮನ್. ಈ ಹೆಸರು ಬರೀ ಹೆಸರಲ್ಲ. ಈ ದೇಶದ ಕೀರ್ತಿ. ಕೋಟಿಕೋಟಿ ಕನಸುಗಳನ್ನ ಸಾಕಾರ ಮಾಡಿದ್ದೇ ಈ ಸ್ವಪ್ನಾ. ಇವರು ಹುಟ್ಟಿದ್ದು 29 ಅಕ್ಟೋಬರ್ 1996ರಂದು. ಹುಟ್ಟೂರು ಪಶ್ಚಿಮ ಬಂಗಾಳದ ಜಲ್ಪಾಯ್ಗುರಿ. ಸ್ವಪ್ನಾ ಅವರು ಏಷ್ಯನ್ ಗೇಮ್ಸ್ 2018ರ ಹೆಪ್ಟಾಥ್ಲಾನ್ ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ರು. ಈ ದೇಶದ ಕೀರ್ತಿ ಬೆಳಗಿದವರು.
ಸ್ವಪ್ನಾ ಬರ್ಮನ್ ಹುಟ್ಟುತ್ತಲೆ ಎರಡೂ ಪಾದಗಳಲ್ಲಿ ಆರು ಬೆರಳುಗಳನ್ನು ಹೊಂದಿದ್ರು. ಇವರಿಗೆ ಓಡಲು ದೊಡ್ಡದಾದ ಶೂ ಅವಶ್ಯಕತೆ ಇತ್ತು. ಆದರೆ ಅವರ ಮನೆಯಲ್ಲಿ ಬಡತನ. ಶೂ ಖರೀದಿಸೋದು ಕಷ್ಟವಾಗಿತ್ತು. ಅವರಿಗೆ ಅಷ್ಟು ಹಣ ತೆರಲು ಸಾಧ್ಯ ವಾಗದೇ ತುಂಬಾ ನೋವು ಅನುಭವಿಸಿದರು.


ಅವರ ತಂದೆ ಪಂಚಾನನ್ ಬರ್ಮಾ ಆಟೋ ಚಾಲನೆ ಮಾಡಿ ಕುಟುಂಬ ಸಾಗಿಸುತ್ತಿದ್ದರು. ಆದರೆ, 2013 ರಲ್ಲಿ ಅವರಿಗೆ ಲಕ್ವ ಹೊಡೆದ ಕಾರಣ ಹಾಸಿಗೆ ಹಿಡಿದಿದ್ದರು. ಇನ್ನು ಅವರ ತಾಯಿ ಬಸನ ಟೀ ಎಸ್ಟೇಟ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವಪ್ನಾ ಅವರಿಗೆ ಇಬ್ಬರು ತಮ್ಮಂದಿರು ಹಾಗೂ ಒಬ್ಬ ತಂಗಿ ಇದ್ದಾರೆ.
ಈ ಬಡತನದ ಕಾರಣ ಸ್ವಪ್ನಾ ಅವರಿಗೆ ಒಬ್ಬ ಅಥ್ಲೀಟ್ಗೆ ಬೇಕಾದ ಪೌಷ್ಟಿಕ ಆಹಾರ ಪೂರೈಕೆ ಆಗಲಿಲ್ಲ. ಇದೆಲ್ಲದರ ನಡುವೆ ಕೆಲವು ದಿನಗಳಿಂದ ದವಡೆ ನೋವಿನಿಂದ ಬಳಲುತ್ತಿದ್ದರು. ಆದರೂ ಸಹ ಏಷ್ಯನ್ ಗೇಮ್ನಲ್ಲಿ ಭಾಗವಹಿಸಿದ್ದರು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಅವರ ಕುಟುಂಬದ ಬೆಂಬಲ ಹಾಗೂ ಅವರ ಛಲ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.


ಸಪ್ನಾ ಅವರ ಸಾಧನೆಯ ಹಾದಿಯ ಬಗ್ಗೆ ಹೇಳಬೇಕೆಂದರೆ ಹೆಮ್ಮೆಯೆನ್ನಿಸುತ್ತೆ. ಸ್ವಪ್ನ ಪಡೆದ ಚಿನ್ನದ ಪದಕ ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ದೇಶಕ್ಕೆ ದೊರಕಿರುವ ಚೊಚ್ಚಲ ಚಿನ್ನದ ಪದಕ. ಹಾಗೆಯೇ 6000ಕ್ಕೂ ಹೆಚ್ಚು ಅಂಕಗಳನ್ನು ಕಲೆ ಹಾಕಿದ ಐದನೇ ಕ್ರೀಡಾಪಟು ಎಂಬ ಕೀರ್ತಿಗೂ ಪಾತ್ರವಾದರು.
ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಬರ್ಮನ್ ಒಟ್ಟು 6026 ಅಂಕಗಳನ್ನು ಕಲೆ ಹಾಕಿದರು. ಹೈ ಜಂಪ್ಹಾಗೂ ಜಾವೆಲಿನ್ ಎಸೆತದಲ್ಲಿ ಅನುಕ್ರಮವಾಗಿ 1003 ಹಾಗೂ 872ಅಂಕಗಳನ್ನು ಕಲೆ ಹಾಕಿ ಗೆಲುವು ದಾಖಲಿಸಿದ ಸ್ವಪ್ನ ಶಾಟ್ ಫುಟ್ ಹಾಗೂ ಲಾಗ್ ಜಂಪ್ನಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ಇನ್ನು 100 ಮೀಟರ್ನಲ್ಲಿ 5ನೇ ಹಾಗೂ 200 ಮೀಟರ್ ಓಟದಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡರು. ಅಷ್ಟೇ ಅಲ್ಲದೆ ಇವರು ಗ್ರೇಟ್ ಸ್ಪೋರ್ಟ್ಸ್ ಇನ್ಫ್ರಾ ವತಿಯಿಂದ 1.5 ಲಕ್ಷ ವಾರ್ಷಿಕ ಸ್ಕಾಲರ್ಶಿಪ್ ಪಡೆಯುತ್ತಿದ್ದಾರೆ.
ಸಾಧಿಸುವ ಛಲ ಇದ್ದರೆ ಎಷ್ಟೇ ಕಷ್ಟ ಎದುರಾದರು ಅಂಜದೇ ಸಾಧಿಸಬಲ್ಲರು ಎಂಬುದಕ್ಕೆ ಸಪ್ನಾ ಬರ್ಮನ್ ನೈಜ ಉದಾಹರಣೆ. ಅಷ್ಟೇ ಅಲ್ಲ ಭಾರತದ ಕೀರ್ತಿ ಹೆಚ್ಚಿಸಿದ ಈ ಯುವತಿ ಪ್ರತಿಯೊಬ್ಬರಿಗೂ ಸ್ಫೂರ್ತಿ!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...