ಸ್ವಾರ್ಥಕ್ಕೆ ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಸ್ವಾರ್ಥಕ್ಕೆ ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ವೇಳೆ ಯತ್ನಾಳ್ ಟೀಂ ಮತ್ತು ವಿಜಯೇಂದ್ರ ಟೀಂ ಭಿನ್ನಾಭಿಪ್ರಾಯದ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಸದಾನಂದಗೌಡರು ಹೇಳಿರೋದು ಸತ್ಯ. ಚಿನ್ನದ ತಟ್ಟೆಯಲ್ಲಿ ಇಟ್ಟುಕೊಡುತ್ತಿದ್ದಾರೆ. ನಾವು ಅದನ್ನ ಇನ್ನೂ ಕ್ರೀಯಾಶೀಲವಾಗಿ ಬಳಸಿಕೊಳ್ಳಬೇಕು. ಪಕ್ಷ ಯಾರಿಂದಲೂ ಇಲ್ಲ.
ಯಾರೇ ಇದ್ದರೂ ಇಲ್ಲದೇ ಇದ್ದರೂ ಪಕ್ಷ ಇರುತ್ತದೆ. ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಬಿಚ್ಚೋರು ಇದ್ದರೆ ಯಾರು ಬೇಕಾದರೂ ಬಿಚ್ಚಲಿ. ನಾನು ಹೇಳೋದು ಕೂಡಿ ಬಾಳಿದರೇ ಸ್ವರ್ಗ ಸುಖ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ನರ್ತನ ಮಾಡುತ್ತಿದೆ. ಇದನ್ನ ನಾವು ಬಳಕೆ ಮಾಡಿಕೊಳ್ಳಬೇಕು. ಸ್ವಾರ್ಥಕ್ಕೆ ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ ಎಂದಿದ್ದಾರೆ.