ಆನ್ಲೈನ್ ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿ, ಬೆಂಗಳೂರಿನ ಮಹಿಳೆಯೊಬ್ಬಳಿಗೆ ಕ್ಷಮಾಪಣೆ ಪತ್ರ ಕಳುಹಿಸಿದೆ. ಸ್ವಿಗ್ಗಿ ಡಿಲೆವರಿ ಬಾಯ್ ದುರ್ವರ್ತನೆ ಕಾರಣಕ್ಕೆ ಸ್ವಿಗ್ಗಿ ಕಂಪನಿ ಕ್ಷಮೆ ಕೇಳಬೇಕಾಗಿದೆ. ಕ್ಷಮಾಪಣಾ ಪತ್ರದ ಜೊತೆ ಸ್ವಿಗ್ಗಿ 200 ರೂಪಾಯಿ ಮೌಲ್ಯದ ಕೂಪನ್ ನೀಡಿದೆ ಎನ್ನಲಾಗಿದೆ.
ಸ್ವಿಗ್ಗಿ ಡಿಲೆವರಿ ಬಾಯ್, ಮಹಿಳೆ ಜೊತೆ ಜಗಳವಾಡಿದ್ದನಂತೆ. ಅಸಭ್ಯವಾಗಿ ಮಾತನಾಡಿದ್ದಲ್ಲದೆ ಸೆಕ್ಸ್ ಬಗ್ಗೆ ಮಾತನಾಡಿದ್ದ ಎನ್ನಲಾಗಿದೆ. ಪೀಡಿತೆ ಶನಿವಾರ ಫೇಸ್ಬುಕ್ ನಲ್ಲಿ ಈ ವಿಷ್ಯವನ್ನು ಹೇಳಿದ್ದಳು.
ಗುರುವಾರ ಮಹಿಳೆ ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದ್ದಳಂತೆ. ಆಹಾರವನ್ನು ವಿಳಾಸಕ್ಕೆ ತಂದ ಡಿಲೆವರಿ ಬಾಯ್ ಹೇಳಿದ ಮಾತು ಕೇಳಿ ಮಹಿಳೆ ಆಘಾತಕ್ಕೊಳಗಾಗಿದ್ದಳಂತೆ. ಆತ ಪರೋಕ್ಷವಾಗಿ ಸೆಕ್ಸ್ ಬಗ್ಗೆ ಮಾತನಾಡಿದ್ದನಂತೆ. ಇದನ್ನರಿತ ಮಹಿಳೆ ತಕ್ಷಣ ಆಹಾರದ ಪೊಟ್ಟಣ ಪಡೆದು ಬಾಗಿಲು ಹಾಕಿದ್ದಳಂತೆ
ಮಹಿಳೆ, ಕಂಪನಿ ಗ್ರಾಹಕ ಸೇವೆಗೆ ಕರೆ ಮಾಡಿ ದೂರು ನೀಡಿದ್ದಳಂತೆ. ಕಂಪನಿಯಿಂದ ಬಂದ ಪ್ರತಿಕ್ರಿಯೆ ಕೂಡ ಆಶ್ಚರ್ಯ ಹುಟ್ಟಿಸಿತ್ತು. ಕ್ಷಮಾಪಣಾ ಪತ್ರದ ಜೊತೆ 200 ರೂಪಾಯಿ ಮೌಲ್ಯದ ಕೂಪನ್ ಕಳುಹಿಸಿದ್ದರು ಎಂದು ಮಹಿಳೆ ಹೇಳಿದ್ದಾಳೆ.