ನಿಮಗೆ ಶ್ರೇಷ್ಟವಾದ ಕೆಲಸವನ್ನು ಮಾಡಲು ಆಗದಿದ್ರೆ, ಮಾಡುವ ಕೆಲಸವನ್ನೇ ಶ್ರೇಷ್ಟವಾಗಿ ಮಾಡಿ ಎನ್ನುವ ಮಾತಿದೆ. ಯಾವುದೇ ಕೆಲಸ ಆಗಲಿ ಅದನ್ನು ಸಣ್ಣದಾಗಿ ನೋಡದೆ, ಶ್ರದ್ಧೆ, ಭಕ್ತಿಯಿಂದ ಚೆನ್ನಾಗಿ ಮಾಡಬೇಕು. ಅದೇ ಇಲ್ಲಿ ಇಲ್ಲೊಬ್ಬ ಮಹಿಳೆ ತಮ್ಮ ಕೆಲಸ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ.
ಲಕ್ಷ್ಮಿ ಎನ್ನುವ ಮಹಿಳೆ ಮರಾಠಿ ಭಾಷೆಯ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಾರೆ. ಅದರ ಜೊತೆಗೆ ಜೀವನ ನಡೆಸಲು ಪಾರ್ಟ್ ಟೈಮ್ ಆಟೋ ಡ್ರೈವರ್ ಕೂಡ ಆಗಿಯೂ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆ ಧಾರಾವಾಹಿಗಳಲ್ಲಿ ನಟನೆ ಮಾಡುವ ಅವರು ರಾತ್ರಿ ಆಟೋ ಚಾಲಕಿಯಾಗಿ ಕೆಲಸ ಮಾಡುತ್ತಾರೆ.
ಅವರ ಈ ಕೆಲಸ ನೋಡಿ ಬಾಲಿವುಡ್ ಖ್ಯಾತ ನಟ ಬೊಮ್ಮನ್ ಇರಾನಿ ಮೆಚ್ಚಿಕೊಂಡಿದ್ದಾರೆ. ಆಕೆಯ ಆಟೋ ಹತ್ತಿ ಪ್ರಯಾಣ ಮಾಡಿದ್ದ ಅವರು ಲಕ್ಷ್ಮಿ ವಿಡಿಯೋ ಹಾಗೂ ಆಕೆಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಒಬ್ಬ ಅದ್ಭುತವಾದ ಸೂಪರ್ ಮಹಿಳೆಯನ್ನು ನಾನು ಭೇಟಿ ಮಾಡಿದೆ. ಮರಾಠಿ ಧಾರಾವಾಹಿಯಲ್ಲಿ ನಟಿಸುವ ಲಕ್ಷ್ಮಿ ಆಟೋ ಡ್ರೈವರ್ ಸಹ ಹೌದು. ಅವರು ನಿಜವಾದ ಸ್ಫೂರ್ತಿ ಹಾಗೂ ರಿಯಲ್ ಹೀರೋ.” ಎಂದಿರುವ ಅವರು ಲಕ್ಷ್ಮಿಗೆ ಶುಭ ಹಾರೈಸಿದ್ದಾರೆ. ಇದು ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು.. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ.
ಹಗಲಿನಲ್ಲಿ ಕಿರುತೆರೆ ನಟಿ.. ರಾತ್ರಿ ವೇಳೆ ಚಾಲಕಿ..!
Date: