ಹಣದ ಆಸೆಗೆ ಬಲಿ ಆಯ್ತಾ ಒಂಟಿ ಮಹಿಳೆಯ ಜೀವ !

Date:

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಯಲ್ಲಿ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಆಸೆಗೆ ಒಂಟಿ ಮಹಿಳೆಯನ್ನ ಕೊಲೆ ಮಾಡಿದ ಆರೋಪಿಯನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ರಜಿನ್ನೇಶ್ ಬಂಧಿತ ಆರೋಪಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಬೆಟ್ಟದಾಸನಪುರ ಸಾಯಿ ಶಕ್ತಿ ಬಡಾವಣೆಯಲ್ಲಿ ಕೊಲೆಯಾಗಿತ್ತು. ಮಹಿಳೆ ಪತಿ ಹಾರ್ಡ್ವೇರ್ ಶಾಪ್ ಜತೆ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರು. ಈ ವೇಳೆ ಮನೆಗೆ ನುಂಗಿ ಒಬ್ಬಂಟಿಯಾಗಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಮಧ್ಯಾಹ್ನ ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಜನೀಶ್ ಕುಮಾರ್ ಎಂಬಾತ ಮಹಿಳೆಯನ್ನೂ ಕೊಂದು ಪರಾರಿ ಆಗಿದ್ದ. ಅಂದಹಾಗೇ ಮಹಿಳೆಯ ಪತಿ ಪೇಂಟ್ ಡಿಲರ್‌ಶಿಪ್‌ ಹೊಂದಿದ್ದರೆ, ಮಹಿಳೆಯ ಸಹೋದರ ಏರಿಯಾದಲ್ಲಿ ಪೇಂಟ್ ಅಂಗಡಿ ನಡೆಸುತ್ತಿದ್ದ. ಹೀಗಿದ್ದಾಗ ರಜನೀಶ್‌ ಕಳೆದ ಒಂದೂವರೆ ವರ್ಷಗಳ ಹಿಂದೆ ಈ ಕುಟುಂಬಕ್ಕೆ ಪರಿಚಿತನಾಗಿದ್ದ. ಪೇಂಟ್ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಸಹಾಯಕ್ಕೆ ರಜನೀಶ್‌ನನ್ನು ಕರೆಯುತ್ತಿದ್ದರು.

ಮಹಿಳೆಯ ಕುಟುಂಬದ ಜತೆಗೆ ಆತ್ಮೀಯನಾಗಿದ್ದ.
ಕೊಲೆ ನಡೆದ ಹಿಂದಿನ ದಿನ ಮಹಿಳೆಯ ಪತಿ ವ್ಯಾಪಾರ ಆಗಿದ್ದ ಹಣ ಮನೆಗೆ ತೆಗೆದುಕೊಂಡು ಹೋಗಿದ್ದ ಬಗ್ಗೆ ರಜನೀಶ್‌ ಗಮನಿಸಿದ್ದ. ಮನೆಯಲ್ಲಿ ಮಹಿಳೆ ಒಬ್ಬಳೇ ಇದ್ದಾಗ ಕೊಂದು ಹಣ ದೋಚುವ ಪ್ಲ್ಯಾನ್‌ ಮಾಡಿದ್ದ. ಅದರಂತೆ ಮಹಿಳೆ ಮನೆಗೆ ಹೋಗಿದ್ದ ಆರೋಪಿ ಅಲ್ಲೇ ಇದ್ದ ಟವಲ್‌ನಿಂದ ಹಿಂದಿನಿಂದ ಬಂದು ಕುತ್ತಿಗೆಗೆ ಬಿಗಿದಿದ್ದಾನೆ. ಬಳಿಕ ಹಣಕ್ಕಾಗಿ ಮನೆ ಪೂರ್ತಿ ಹುಡುಕಿದ್ದಾನೆ. ಆದರೆ ಅಂಗಡಿಯಿಂದ ರಾತ್ರಿ ತಂದ ಹಣವನ್ನು ಬೆಳಗ್ಗೆ ಬ್ಯಾಂಕಿಗೆ ಹಾಕಲಾಗಿತ್ತು. ಹೀಗಾಗಿ ಮನೆಯಲ್ಲಿ ಹೆಚ್ಚು ಹಣ ಸಿಕ್ಕಿರಲಿಲ್ಲ. ಬಳಿಕ ಮಹಿಳೆಯ ಮೈಮೇಲಿದ್ದ ಓಲೆ ಜತೆಗೆ ಎಂಟು ಸಾವಿರ ಹಣವನ್ನು ದೋಚಿದ್ದ. ಸದ್ಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಸೆರೆಹಿಡಿದು, ತನಿಖೆಯನ್ನು ಮುಂದುವರಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...