ಹರ್ಬಲ್ ಸೋಪ್ ನಿಂದ ಬದುಕು ಕಟ್ಟಿಕೊಂಡ ಮಹಿಳೆ!

Date:

ಇವರ ಹೆಸರು ಜೀನಾ ಖುಮುಜುಮ್…64ರ ಹರೆಯದ ಮಣಿಪುರದ ಉದ್ಯಮಿ. ಮಣಿಪುರದಲ್ಲಿ ಇವರನ್ನು ಗಿಡಮೂಲಿಕೆ ವೈದ್ಯೆ ಅಂತಾನೇ ಕರೀತಾರೆ. ಮಂಗಲ್’ ಹೆಸರಿನಲ್ಲಿ ಜೀನಾ 8 ಬಗೆಯ ಗಿಡಮೂಲಿಕೆ ಸಾಬೂನುಗಳನ್ನು ತಯಾರಿಸ್ತಾರೆ. 2004ರಲ್ಲಿ ಮಂಗಲ್ ಬ್ರಾಂಡ್ನ ಸೋಪ್ಗಳು ಮಾರುಕಟ್ಟೆಗೆ ಬಂದಿದ್ದವು.
ಜೀನಾ ಅವರ ಮಂಗಲ್ ಸೋಪ್ಗಳಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ. ಮೊದಲು ಈ ಬ್ರಾಂಡನ್ನು ‘ಅವರ್ ರೆಸ್ಟ್ ಹೌಸ್’ ಅಂತಾ ಕರೆಯಲಾಗ್ತಿತ್ತು. ದೆಹಲಿಯಲ್ಲಿ ನಡೆದ ರಾಷ್ಟ್ರಪತಿ ಭವನ ಆಯೋಜನೆ ಮಾಡಿದ ಪ್ರದರ್ಶನಲ್ಲಿ ಜೀನಾ ಪಾಲ್ಗೊಂಡಿದ್ರು. ನಂತರ 2011ರಲ್ಲಿ ಇದಕ್ಕೆ ಮಂಗಲ್’ ಎಂದು ಜೀನಾ ಮರುನಾಮಕರಣ ಮಾಡಿದ್ರು.


ಇನ್ನು ತಮ್ಮ ಅಸ್ತಿತ್ವ ಕಂಡುಕೊಳ್ಳಲು ನಾಲ್ಕು ಮಕ್ಕಳ ತಾಯಿ ಜೀನಾ ನಡೆಸಿದ ಹೋರಾಟ ನಿಜಕ್ಕೂ ಮಾದರಿಯಾಗುವಂಥದ್ದು. ಉದ್ಯಮಿಯಾಗಿ ಗುರುತಿಸಿಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿರುವ ಅವರು ಕಠಿಣ ಹಾದಿ ಸವೆಸಿದ್ದಾರೆ. ಬಡತನದ ಬದುಕಿನಲ್ಲಿ ಮಕ್ಕಳಿಗೆ ಆಸರೆಯಾಗಲು ಏನಾದ್ರೂ ಮಾಡಲೇಬೇಕೆಂದು ನಿರ್ಧರಿಸಿ ಉದ್ಯಮ ವಲಯಕ್ಕೆ ಬಂದವರು.
ಜೀನಾ ಅವರು ಉದ್ಯಮಕ್ಕೆ ಎಂಟ್ರಿಯಾಗಿದ್ದು ಉಣ್ಣೆಯ ಬ್ಲೌಸ್, ಸಾಕ್ಸ್, ಗ್ಲೌಸ್ಗಳನ್ನೆಲ್ಲ ಕೈಯಲ್ಲೇ ಹೆಣೆಯಲು ಆರಂಭಿಸುವುದರ ಮೂಲಕ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇಡದ ಸಿಮೆಂಟ್ ಚೀಲಗಳಿಂದ ಬಗೆಬಗೆಯ ಕ್ಯಾರಿ ಬ್ಯಾಗ್ಗಳನ್ನು ತಯಾರಿಸಿದ್ರು. ಆ ಸಮಯದಲ್ಲೇ ಜೀನಾರ ಬದುಕನ್ನೇ ಬದಲಾಯಿಸುವ ಘಟನೆಯೊಂದು ನಡೀತು. ಸಾಬೂನು ತಯಾರಿಕೆ ಬಗ್ಗೆ ತರಬೇತಿ ಪಡೆಯುವ ಅವಕಾಶ ಅವರಿಗೆ ಸಿಕ್ಕಿತ್ತು.
ಜೀನಾ ಅವರು ಸಾಬೂನು ತರಬೇತಿ ಬಳಿಕ ಮನೆಯಲ್ಲೇ ಸೋಪ್ ತಯಾರಿಸಲು ಶುರು ಮಾಡಿದ್ರು. ಬಳಿಕ ಸೌತೆಕಾಯಿ, ನಿಂಬೆಹಣ್ಣು, ಅಲೋವೆರಾ, ಅರಿಶಿನವನ್ನೆಲ್ಲ ಬಳಸಿ ಬಗೆ ಬಗೆಯ ಸಾಬೂನು ತಯಾರಿಸಿದ್ರು. ಸಹಜವಾಗಿಯೇ ಜೀನಾ ಅವರ ಆಸಕ್ತಿ ಗಿಡಮೂಲಿಕೆಗಳ ಕಡೆಗಿತ್ತು. ಪ್ರತಿನಿತ್ಯ ತಲೆ ಹಾಗೂ ದೇಹ ಸ್ವಚ್ಛಗೊಳಿಸಲು ಗಿಡಮೂಲಿಕೆಗಳನ್ನು ಬಳಸಿದ್ರೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮನೆಯ ಹಿರಿಯರಿಂದ ಜೀನಾ ತಿಳಿದುಕೊಂಡಿದ್ರು.
ಇನ್ನು ಕೆಲವರು ಜಪಾನ್ಗೆ ತೆರಳಿ ಅಲ್ಲಿ ಸಾವಯವ ಕೃಷಿ ಬಗ್ಗೆ ತರಬೇತಿ ಪಡೆದುಕೊಂಡು ಬಂದಿದ್ರು. ಇದೆಲ್ಲವನ್ನೂ ನೋಡಿದಾಗ ತಾವು ಕೂಡ ಸಾಬೂನು ತಯಾರಿಕೆ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕೆಂದು ನಿರ್ಧರಿಸಿದ್ರು ಮೊದಲ ಬಾರಿ ಸಾಬೂನು ತಯಾರಿಸಿದ ನೆನಪು ಜೀನಾ ಮನದಲ್ಲಿ ಇನ್ನೂ ಹಸಿರಾಗಿದೆ. ಒಂದುಹೊತ್ತಿನ ಊಟ ಬಿಟ್ಟು, ಅದೇ ಹಣದಲ್ಲಿ ಅವರು ಸಾಬೂನು ತಯಾರಿಸಿದ್ರು


ಈಗ ಜೀನಾ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಪ್ರತಿದಿನ 70 – 80 ಸಾಬೂನುಗಳನ್ನು ತಯಾರಿಸ್ತಿದ್ದಾರೆ. ವರ್ಷದ ಹಿಂದಷ್ಟೆ ಜೀನಾ ಪತಿಯನ್ನು ಕಳೆದುಕೊಂಡಿದ್ದಾರೆ. ಮಗಳು ಮತ್ತು ಸೊಸೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಉತ್ತಮ ಜಗತ್ತು ನಿರ್ಮಾಣವಾಗಬೇಕಂದ್ರೆ ಮಹಿಳಾ ಸಬಲೀಕರಣ ಅಗತ್ಯ ಅನ್ನೋದು ಜೀನಾರ ಅಭಿಪ್ರಾಯ.
ಈಗ ಜೀನಾ ಅವರು ವಿಧವೆಯರಿಗೆ ಗಿಡಮೂಲಿಕೆಗಳ ಸೋಪ್ ತಯಾರಿಕೆ ಬಗ್ಗೆ ತರಬೇತಿ ನೀಡ್ತಿದ್ದಾರೆ. ಒಂದು ಸೋಪ್ಗೆ 20 ರೂಪಾಯಿಯಂತೆ ಜೀನಾ ಮಾರಾಟ ಮಾಡ್ತಾರೆ. ತಿಂಗಳಿಗೆ 10,000 ರೂಪಾಯಿ ಸಂಪಾದಿಸ್ತಾರೆ. ಆನ್ಲೈನ್ನಲ್ಲೂ ಅವರು ಮಂಗಲ್ ಸೋಪ್ಗಳನ್ನು ಮಾರಾಟ ಮಾಡ್ತಿದ್ದಾರೆ. ಭಾರತದ ರಾಷ್ಟ್ರೀಯ ಇನ್ನೋವೇಶನ್ ಫೌಂಡೇಶನ್ ಜೀನಾ ಅವರ ಪ್ರತಿಭೆ ಮತ್ತು ಪರಿಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ..

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...