ಹಲಸೂರು ಗೇಟ್ ಪೊಲೀಸರ ಕಾರ್ಯಾಚರಣೆ: ಪರಿಚಯಸ್ಥರಿಗೆ ಗಾಂಜಾ ಮಾರುತ್ತಿದ್ದವ ಅರೆಸ್ಟ್!
ಬೆಂಗಳೂರು:- ಹಲಸೂರು ಗೇಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಯು, ನಗರದ ಬನ್ನಪ್ಪ ಪಾರ್ಕ್ ಬಳಿ ಪರಿಚಯಸ್ಥರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದಾಗ ಲಾಕ್ ಆಗಿದ್ದಾನೆ.
ಆರೋಪಿಯು, ಓರಿಸ್ಸಾ, ಮಹಾರಾಷ್ಟ್ರದಿಂದ ಗಾಂಜಾ ತರಿಸುತ್ತಿದ್ದ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಯಿಂದ 7 ಲಕ್ಷ ಮೌಲ್ಯದ 12 ಕೆಜಿ ಗಾಂಜಾ ಹಾಗೂ ಒಂದು ಬೈಕ್ ಸೀಜ್ ಮಾಡಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.