500 – 1000 ರೂ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಅಂದರೆ ಡಿ ಮಾನಿಟೈಸೇಷನ್ ನಂತರ ನಗದು ವ್ಯವಹಾರ ಕಡಿಮೆಯಾಗಿದೆ. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿದೆ. ನಿಧಾನ ಕಾಯಿನ್ ಬಳಕೆ ಬಹಳ ಕಡಿಮೆಯಾಗಿದೆ.

ಆದರೆ ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮಲ್ಲಿ ಇಂಥಾ ನಾಣ್ಯಗಳಿದ್ದರೆ ನೀವು ಕೋಟ್ಯಾಧೀಶರಾಗಬಹುದು. ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರ ಇರುವ 5 ಅಥವಾ 10 ರೂ ಕಾಯಿನ್ ಇದ್ದರೆ ಅದನ್ನು ಹರಾಜು ಮಾಡಬಹುದು..!

ಕೊರೋನಾ ದೆಸೆಯಿಂದ ನಿರುದ್ಯೋಗ ಹೆಚ್ಚಾಗಿದೆ . ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ವೇತನ ಕಡಿಮೆಯಾಗಿದೆ . ಜನ ಹಣಕ್ಕಾಗಿ ನಾನಾ ಐಡಿಯಾಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಈ ನಾಣ್ಯ ಹರಾಜು ಐಡಿಯಾ ಕೂಡ ಒಂದು.
ಮಾತಾ ವೈಷ್ಣೋ ದೇವಿ ಚಿತ್ರವಿರುವ 5 ಅಥವಾ 10 ರೂ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.
2002 ರಲ್ಲಿ ಈ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. ಆಗ ಹೆಚ್ಚಿನ ಬೇಡಿಕೆ ಇತ್ತು. ಮಾತಾ ವೈಷ್ಣೋ ದೇವಿ ಹಿಂದೂಗಳ ಆರಾಧ್ಯ ದೇವರಾಗಿದ್ದು ಬಹಳಷ್ಟು ಜನ ಲಕ್ಷ ಲಕ್ಷ ಕೊಟ್ಟು ಈ ಕಾಯಿನ್ ಗಳನ್ನು ಪಡೆಯುತ್ತಿದ್ದಾರೆ.
ಇದೇ ರೀತಿ ಮುಸ್ಲೀಂ ಸಮುದಾಯದಲ್ಲಿ 786 ಸೀರಿಸ್ ಇರುವ ನೋಟುಗಳನ್ನು ವಿಶೇಷವಾಗಿ ಪರಿಗಣಿಸಲಾಗುತ್ತಿದ್ದು. ಇದು ಕೂಡ ವೈರಲ್ ಆಗಿದೆ.






