ಹಾಗಲಕಾಯಿ ಆರೋಗ್ಯಕ್ಕೆ ಉಪಕಾರಿ, ಆದರೆ ಎಲ್ಲರಿಗೂ ಅಲ್ಲ! ಇವರು ಸೇವನೆ ಮಾಡಬಾರದು
ಹಾಗಲಕಾಯಿ ತನ್ನ ಕಹಿ ರುಚಿಯಿಂದ ಖ್ಯಾತಿಯಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಬಹುಪಯುಕ್ತ ತರಕಾರಿಯಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಬಹುದು. ಹಾಗಲಕಾಯಿ ವಿಟಮಿನ್ ಸಿ, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ.
ವಿಶೇಷವಾಗಿ, ಹಾಗಲಕಾಯಿಯಲ್ಲಿರುವ ಉತ್ಕೃಷಣ ನಿರೋಧಕಗಳು ದೇಹದ ಜೀವಕೋಶಗಳನ್ನು ಉರಿಯೂತ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಪಾಲಕ್ಗಿಂತ ಹೆಚ್ಚು ಕ್ಯಾಲ್ಸಿಯಂ ಮತ್ತು ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಂ ಹಾಗಲಕಾಯಿಯಲ್ಲಿ ಲಭ್ಯವಿದೆ.
ಆದರೆ, ಆರೋಗ್ಯ ತಜ್ಞರ ಎಚ್ಚರಿಕೆ ಏನು?
ಹಾಗಲಕಾಯಿ ಎಲ್ಲರಿಗೂ ಒಳ್ಳೆಯದಾಗಿರದು. ಕೆಲವರಿಗೆ ಇದರಿಂದ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ, ಈ ಕೆಳಗಿನವರನ್ನು ವೈದ್ಯರು ಎಚ್ಚರಿಸುತ್ತಿದ್ದಾರೆ:
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು: ಅವರಿಗೆ ಇದು ಅಹಿತಕರವಾಗಬಹುದು.
ಜೀರ್ಣಕ್ರಿಯೆ ಸಮಸ್ಯೆಯುಳ್ಳವರು: ವಾಂತಿ, ಭೇದಿ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಈ ತರಕಾರಿ ತಿನ್ನಬಾರದು.
ದುರ್ಬಲ ದೇಹಸ್ಥಿತಿಯವರು ಅಥವಾ ಶಸ್ತ್ರಚಿಕಿತ್ಸೆಗೊಳಗಾದವರು: ಇದು ರಕ್ತದ ಸಕ್ಕರೆವನ್ನು ತೀವ್ರವಾಗಿ ಕಡಿಮೆ ಮಾಡಬಹುದು.
ಮಧುಮೇಹ, ಇನ್ಸುಲಿನ್ ಅಥವಾ ಇತರ ಔಷಧಿಗಳನ್ನು ತೆಗೆದುಕೊಳ್ಳುವವರು: ರಕ್ತದ ಸಕ್ಕರೆ ತೀವ್ರವಾಗಿ ಇಳಿಯುವ ಸಾಧ್ಯತೆ.
ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಯುಳ್ಳವರು: ಹೆಚ್ಚು ಸೇವನೆ ಮಾಡಿದರೆ ದೋಷಕಾರಿಯಾಗಬಹುದು.