ಹಾಲು ಮಾಮನ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ತುಮಕೂರು ಜಿಲ್ಲೆಯ ಮಧುಗಿರಿಯ ಬಾಲಕಿಯೊಬ್ಬಳು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾಳೆ.
ಮಧುಗಿರಿಯ ಚೇತನಾ ಆಂಗ್ಲ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ನಿರುಪಮಾ ಆಚಾರ್ ಪತ್ರ ಬರೆದವಳು.
ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಗ್ರಾಮದ ಅನಂತರಾಜ್ ಎಂಬುವವರ 8 ವರ್ಷದ ಮಗ 4 ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ. ಮಗನ ಸಾವಿನ ಆಘಾತದಿಂದ ಅನಂತರಾಜ ಅವರು ಕಾಯಿಲೆ ಬಿದ್ದಿದ್ದರು. ಪರಿಹಾರ ಹಣಕ್ಕಾಗಿ ಮಧುಗಿರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪರಿಹಾರ ಬಂದಿಲ್ಲ. ಮಾ. 21ರಂದು ಕೋರ್ಟ್ ಗುಮಾಸ್ತ ವೇಣುಗೋಪಾಲ್ ಚೆಕ್ ಕೊಡುವುದಾಗಿ ಕರೆಸಿಕೊಂಡು ಬೆಳಗ್ಗಿನಿಂದ ಸಂಜೆಯವರೆಗೆ ಸತಾಯಿಸಿದ್ದು, ಅನಂತರಾಜ್ ಕೋರ್ಟ್ ಆವರಣದಲ್ಲೇ ಮೃತಪಟ್ಟಿದ್ದಾರೆ.
ಅನಂತರಾಜ್ ಅವರು ಮನೆ ಮನೆಗೆ ಹಾಲು ಹಾಕುತ್ತಿದ್ದರು. ಇವರ ಮಗಳು ಹೇಮಲತಾಳ ಗೆಳತಿ ನಿರುಪಮಾ ಜೆ ಆಚಾರ್.
ತನ್ನ ಸ್ನೇಹಿತೆಯ ಮನೆಗೆ ಕಷ್ಟ ತಿಳಿದಿರುವ ಈ ಪುಟ್ಟ ಬಾಲಕಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಿಗೆ ಪತ್ರ ಬರೆದು ಹಾಲುಮಾಮಾ (ಅನಂತರಾಜ) ಅವರ ಕುಟುಂಬಕ್ಕೆ ನ್ಯಾಯ ಕೊಡಿ ಅಂತ ಮನವಿ ಮಾಡಿದ್ದಾಳೆ.
ಹಣನೀಡಲು ತಡಮಾಡಿದ್ದರಿಂದಲೇ ಹಾಲು ಮಾಮ ಮೃತಪಟ್ಟಿದ್ದಾರೆ. ಹಾಲು ಮಾಮನೂ ಈಗ ಇಲ್ಲ. ಹಣವೂ ಇಲ್ಲ. ಅವರ ಕುಟುಂಬಕ್ಕೆ ನೆರವಾಗಿ ಎಂದು ನಿರುಪಮಾ ಪತ್ರದಲ್ಲಿ ತಿಳಿಸಿದ್ದಾಳೆ.
ಹಾಲು ಮಾಮನ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ಹೈಕೋರ್ಟ್ ಸಿಜೆಗೆ ಪತ್ರ ಬರೆದ ಬಾಲಕಿ..!
Date: