ಹಿಂದೂ ಯುವಕನ ಜೊತೆ ಕೂತಿದ್ಯಾ ಎಂದು ಮುಸ್ಲಿಂ ಯುವಕರಿಂದ ಗಲಾಟೆ: ಐವರು ಅರೆಸ್ಟ್.!
ಬೆಂಗಳೂರು: ಮುಸ್ಲಿಂ ಯುವತಿ ತನ್ನ ಗೆಳೆಯನ ಜೊತೆ ಬೈಕ್ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್‌ವೊಂದು ಕಿರಿಕ್ ಮಾಡಿ, ಯುವಕನ ಮೇಲೂ ಹಲ್ಲೆ ನಡೆಸಿರುವ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್ ನಲ್ಲಿ ಯುವತಿ ಕೂತಿದ್ದಳು. ಈ ವೇಳೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್ ನಲ್ಲಿ ಯಾಕ್ ಕೂತಿದ್ಯಾ.!?
ನಿನಗೆ ಮಾನ ಮರ್ಯಾದೆ ಇಲ್ವಾ..? ನಿಮ್ಮ ಮನೆಯವರ ಮೊಬೈಲ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದೆ. ಈ ವೇಳೆ ನನ್ನ ಕ್ಲಾಸ್ ಮೇಟ್ ಜೊತೆ ನಾನ್ ಮಾತಾಡ್ತಿದ್ದೀನಿ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಮುಸ್ಲಿಂ ಯುವತಿ ಹೇಳಿದ್ದಾಳೆ.
ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಮುಸ್ಲಿಂ ಯುವಕರ ಗುಂಪು ಯತ್ನಿಸಿದೆ. ಅಲ್ಲದೇ ಯುವಕ ಯುವತಿ ಬೈಕ್ ನಲ್ಲಿ ಕೂತು ಮಾತಾಡುವ ವಿಡಿಯೋವನ್ನು ಆರೋಪಿಗಳು ವೈರಲ್ ಮಾಡಿದ್ದರು. ಸದ್ಯ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಲಾಗಿದೆ.