ನಾಯಿ, ನಿಯತ್ತಿಗೆ ಹೆಸರುವಾಸಿಯಾದ ಪ್ರಾಣಿ. ನಿಯತ್ತು ಎಂದು ಹೇಳುವಾಗ ನಾಯಿ ನಿಯತ್ತು ಎಂದೇ ಸಾಮಾನ್ಯವಾಗಿ ಹೇಳುತ್ತೇವೆ.
ನಾಯಿ ನಿಯತ್ತಿನ ಬಗ್ಗೆ ಈಗ ಮಾತಾಡ್ತಿರೋದಕ್ಕೆ ಕಾರಣ ಏನ್ ಗೊತ್ತಾ?
ನಾಯಿಯೊಂದು ತನ್ನ ಮಾಲೀಕರನ್ನು ಹುಲಿಯಿಂದ ಕಾಪಾಡಿದೆ.
ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಕಾಡಿನಲ್ಲಿ ಸಾಕುನಾಯಿಯೊಂದಿಗೆ ತಮ್ಮ ಎತ್ತನ್ನು ಹುಡುಕಿಕೊಂಡು ಹೋಗುವಾಗ ಏಕಾಏಕಿ ಎರಡು ಹುಲಿಗಳು ದಾಳಿ ನಡೆಸಿವೆ.
ಆಗ ಆ ಎರಡೂ ಹುಲಿಗಳನ್ನು ನಾಯಿ ಎದುರಿಸಿದೆ. ತನ್ನ ಮಾಲೀಕರನ್ನು ಅಚ್ಚರಿ ರೀತಿಯಲ್ಲಿ ಕಾಪಾಡಿದೆ ನಾಯಿ.
ಇದನ್ನು ನಂಬಲು ಕಷ್ಟವಾದರೂ ನಂಬಲೇ ಬೇಕು. ಕನ್ಹಾ ರಣ್ಯ ಇಲಾಖೆ ಸಿಬ್ಬಂದಿ, ಸಾಕುನಾಯಿ ತನ್ನ ಮಾಲೀಕರ ರಕ್ಷಣೆಗೆ ಮುಂದಾದ ಕ್ರಮ ನಿಜಕ್ಕೂ ನಂಬಲು ಅಸಾಧ್ಯ. ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.