ವೃದ್ಧ ತಾಯಿಯನ್ನು ನೀಚ ಪುತ್ರ ತನ್ನ ಹೆಂಡತಿ ಜೊತೆ ಸೇರಿ ಗೃಹಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಮಂಗಳೂರಿನ ತೊಕ್ಕೊಟ್ಟು ಸಮೀಪದ ಕಲ್ಲಾಪು ನಾಗನಕಟ್ಟೆಯಲ್ಲಿ ಈ ಪ್ರಕರಣ ನಡೆದಿದ್ದು, ವೃದ್ಧ ತಾಯಿಯನ್ನು ಹಿರಿಯ ನಾಗರಿಕ ರಕ್ಷಣಾ ಸಮಿತಿಯವರು ರಕ್ಷಿಸಿದ್ದಾರೆ.
ನಾಗೇಶ್ ಶೆಟ್ಟಿಗಾರ್ ಎಂಬಾತ ತಾಯಿಯನ್ನು ಕಡೆಗಾಣಿಸಿ ಕ್ರೌರ್ಯ ಮರೆದ ಪುತ್ರ! ಪತ್ನಿ ಗೀತಾ ಜೊತೆ ಸೇರಿ ಹೆತ್ತಮ್ಮನನ್ನೇ ಕಡೆಗಾಣಿಸಿದ್ದಾನೆ. ಪಾರ್ಶ್ವವಾಯು ಪೀಡಿತ 80 ವರ್ಷದ ತಾಯಿ ಸರಸ್ವತಿಯನ್ನು ಕೋಣೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು. ವೃದ್ಧೆಗೆ ಊಟೋಪಚಾರವೂ ಕೂಡ ಸರಿಯಾಗಿರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಗತಿಯಿಲ್ಲದೇ ವೃದ್ಧೆ ಅದೇ ಕೋಣೆಯಲ್ಲಿ ಮಲ – ಮೂತ್ರ ವಿಸರ್ಜನೆ ಮಾಡಿ ಅಲ್ಲೇ ತಂಗುತ್ತಿದ್ದರು. ಆ ದುರ್ನಾತ ಪರಿಸರದ ಜನರಿಗೂ ತಡೆಯಲಾಗದ ಹಿಂಸೆಯಾಗಿತ್ತು. ಆಕೆಯ ಚೀರಾಟವನ್ನು ಕೂಡ ಕೇಳಲಾಗುತ್ತಿರಲಿಲ್ಲ. ಮನಸ್ಸು ಚುರುಕ್ ಎನ್ನುತ್ತಿತ್ತು. ಹಾಗಾಗಿ ಸ್ಥಳೀಯರು ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಿಮಿಸಿದಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ, ದಂಪತಿಯನ್ನು ತರಾಟೆಗೆತ್ತಿಕೊಂಡಿದ್ದು, ನಾವು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಆಸ್ಪತ್ರೆಗೆ ಸೇರಿಸಲು ನಮ್ಮಲ್ಲಿ ದುಡ್ಡಿಲ್ಲ ಎಂದು ನಾಗೇಶ್ ಹೇಳಿದ್ದಾನೆ. ಅಧಿಕಾರಿಗಳು ಎಚ್ಚರಿಕೆ ನೀಡಿದಾಗ ತಾನು ತಾಯಿಯನ್ನು ಮನೆಯಲ್ಲಿಟ್ಟುಕೊಂಡೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾನೆಂದು ವರದಿಯಾಗಿದೆ.
ಹೆತ್ತ ತಾಯಿಯನ್ನೇ ಗೃಹಬಂಧನದಲ್ಲಿಟ್ಟ ಪಾಪಿ ಪುತ್ರ..!
Date: