ಬೆಳಗಾವಿ: ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ನಡೆದಿದೆ. ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ತಂದೆಯ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ತಾಯಿ ನೌಕರಿ ಗಿಟ್ಟಿಸಿಕೊಂಡಿದ್ದಳು. ತಂದೆ ತೀರಿ ಹೋದ ಬಳಿಕ ತಾಯಿಯ ಆಶ್ರಯದಲ್ಲಿದ್ದ ಎಲ್ಲಾ ಮೂವರು ಮಕ್ಕಳೀಗ ಬೀದಿಗೆ ಬಿದ್ದಿದ್ದಾರೆ. ಬೆಳಗಾವಿ ನಗರದ ಗಣೇಶಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾಗಿ ವರದಿಯಾಗಿದೆ. ಈ ನಡುವೆ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ಓಡಿ ಹೋದ ತಾಯಿ
Date: