ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

Date:

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಹೆಚ್ಚಿಸಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಗ್ಯಾಸ್ ಕಂಪನಿಗಳು ಮತ್ತು ಹೋಟೆಲ್ ಸಂಘದೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಹೆಚ್ಚುವರಿಯಾಗಿ 1,000 ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಇದರೊಂದಿಗೆ ಒಟ್ಟು ಪೂರೈಕೆ 10,000 ಸಿಲಿಂಡರ್ಗಳಿಗೆ ಏರಲಿದೆ ಎಂದು ಹೇಳಿದರು.
ಅಕ್ರಮ ಬಳಕೆಯನ್ನು ತಡೆಯುವ ಉದ್ದೇಶದಿಂದ ಕಮರ್ಷಿಯಲ್ ಗ್ಯಾಸ್ ಬಳಕೆದಾರರು ಕಡ್ಡಾಯವಾಗಿ ಗೇಲ್ ಕಂಪನಿಯಲ್ಲಿ ನೋಂದಣಿ ಮಾಡಿಸಬೇಕು. ಒಂದು ವಾರದೊಳಗೆ ನೋಂದಣಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಈ ಸಿಲಿಂಡರ್ಗಳನ್ನು ಹೋಟೆಲ್, ಡಾಬಾ, ಹಾಸ್ಟೆಲ್, ಪಿಜಿ ಹಾಗೂ ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ವಲಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದುವರೆಗೆ ವಾರಕ್ಕೆ ಸುಮಾರು 1,000 ಸಿಲಿಂಡರ್ ಪೂರೈಕೆಯಾಗುತ್ತಿತ್ತು.
ಹೋಟೆಲ್ ಮಾಲೀಕರ ವಿದ್ಯುತ್ ಬಿಲ್ ಕಡಿತ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ಯೂನಿಟ್ಗೆ ₹2 ಕಡಿತ ಮಾಡುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.
ನೋಂದಣಿ ಮಾಡಿಸದವರಿಗೆ ಕಮರ್ಷಿಯಲ್ ಗ್ಯಾಸ್ ಪೂರೈಕೆ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ ಕೊಪ್ಪಳ: ಉಪ ಮುಖ್ಯಮಂತ್ರಿ ಡಿ.ಕೆ....

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...