ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಂಚುತ್ತಿರೋ ಚೆಂದುಳ್ಳಿ ಚೆಲುವೆ ಅಂದ್ರೆ ತಾನ್ಯ ಹೋಪ್.. ಬಳ್ಳಿಯಂತೆ ಬಳುಕೋ ಮೈಮಾಟ, ಮೋಹಕ ನಗೆಯಿಂದಲೇ ಕನ್ನಡಿಗರ ಮನಗೆದ್ದ ಕನಸಿನ ರಾಣಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕಿದ್ದ ತಾನ್ಯಾ ಇದೀಗ ಚಂದನವನದ ಬೇಡಿಕೆಯ ನಟಿಯಾಗಿದ್ದಾರೆ.
ಚಂದನವನದಲ್ಲಿ ಮಾತ್ರವಲ್ಲ ಈಗಾಗಲೇ ತಮಿಳು, ತೆಲುಗು, ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರೋ ತಾನ್ಯಾ ಅಭಿಮಾನಿಗಳಿಗೆ ಹೊಸ ಅವತಾರದಲ್ಲಿ ದರ್ಶನ ಕೊಡೋ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾಳೆ.
ಎಲ್ಲರ ಮನಸೆಳೆಯೋ ತಾನ್ಯಾ, ಇದೀಗ ಈಜುಕೊಳವೊಂದರಲ್ಲಿ ಹ್ಯಾಪಿ ಮೂಡ್ನಲ್ಲಿ ಸ್ವಿಮ್ಮಿಂಗ್ ಮಾಡ್ತಾ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ದೃಶ್ಯಗಳು ಎಲ್ಲೆಡೆ ಹರಿದಾಡ್ತಿದ್ದು ಪಡ್ಡೆಹುಡುಗರ ಮೈ ಬಿಸಿಯೇರಿಸಿವೆ. ಇನ್ನು ತಾನ್ಯಹೋಪ್ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಚಿರಂಜೀವಿ ಸರ್ಜಾರ ಖಾಕಿ ಸಿನಿಮಾದಲ್ಲೂ ಹೀರೋಹಿನ್ ಪಟ್ಟ ಅಲಂಕರಿಸಿದ್ದಾಳೆ. ರಿಯಲ್ ಸ್ಟಾರ್ ಉಪ್ಪಿಯ ಹೋಮ್ ಮಿನಿಸ್ಟರ್ ಚಿತ್ರದಲ್ಲೂ ಸ್ಕ್ರೀನ್ ಶೇರ್ ಮಾಡಿದ್ದು ಅಭಿಮಾನಿಗಳಿಗೆ ಸಿನಿರಸದೌತಣ ನೀಡಲಿದ್ದಾರೆ.