ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಭರ್ಜರಿ ಪ್ರಚಾರ ಮಾಡ್ತಾ ಇದ್ರು ಬಿಸಿಲನ್ನು ಲೆಕ್ಕಿಸದೆ ಪ್ರಚಾರ ನಡೆಸ್ತಾ ಇದ್ದಾ ನಿಖಿಲ್ ಕುಮಾರಸ್ವಾಮಿ ಅವರಿಗೆ ಈಗಾ ವಿಶ್ರಾಂತಿ ತೆಗೆದುಕೊಳ್ಳುವಂತಾಗಿದೆ.
ನಿಖಿಲ್ ಕುಮಾಸ್ವಾಮಿ ಇಂದು ಪ್ರಚಾರ ಮಾಡುತ್ತಿಲ್ಲ. ನಿನ್ನೆ ರಾತ್ರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಮಾಡುವ ವೇಳೆ ಕಾರ್ಯಕರ್ತರ ತಳ್ಳಾಟ-ನೂಕಾಟದಲ್ಲಿ ನಿಖಿಲ್ ಕಾಲಿಗೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದಿಂದ ನಿಖಿಲ್ ಇಂದು ವಿರಾಮ ಪಡೆದಿದ್ದಾರೆ. ತಡರಾತ್ರಿ ಬೆಂಗಳೂರಲ್ಲಿ ಆಸ್ಪತ್ರೆಗೆ ತೋರಿಸಿ ವೈದ್ಯರ ಸಲಹೆ ಮೇಲೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇವತ್ತು ನಾಗಮಂಗಲದಲ್ಲಿ ನಡೆಯಲಿರುವ ದೇವೇಗೌಡ- ಸಿದ್ದರಾಮಯ್ಯ ಜಂಟಿ ಸಮಾವೇಶದಲ್ಲಿ ನಿಖಿಲ್ ಭಾಗಿಯಾಗಬೇಕಿತ್ತು. ಬರುತ್ತಾರೊ ಇಲ್ವೊ ನೊಡಬೇಕಿದೆ.