ಬುದ್ಧಿವಂತಿಕೆ, ಟ್ಯಾಲೆಂಟ್ ಇದ್ರೆ ಇಡೀ ಜಗತ್ತನ್ನೇ ಗೆಲ್ಲಬಹುದು! ಜೊತೆಗೆ ಒಳ್ಳೇದಾರಿಯಲ್ಲೇ ಕೋಟಿ ಕೋಟಿ ಹಣವನ್ನೂಗಳಿಸಬಹುದು! ಕ್ರಿಯೇಟಿವಿಟಿ ಇಡೀ ವಿಶ್ವವನ್ನೇ ಆಳುತ್ತೆ! ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ ಒಂದೇ ಒಂದು ಸ್ಮಾಲ್ ಆ್ಯಪ್.! ಈ ಆ್ಯಪ್ ನಿಂದ ಪ್ರತಿಷ್ಠಿತ ಐಬಿಎಂ ಕಂಪನಿಗೆ ಸಿಕ್ಕಿದ್ದು ಬರೊಬ್ಬರಿ 9,50,00,000! ಅಂದಹಾಗೆ ಈ ಆ್ಯಪ್ ಅಭಿವೃದ್ದಿಪಡಿಸಿದ್ದು ನಮ್ ಭಾರತದ ಸಂದೇಶ್ ಸುವರ್ಣ ಅನ್ನೋದು ನಮ್ಮ ಹೆಮ್ಮೆ! ಇವ್ರು ಎಂ.ಟೆಕ್ ಮಾಡಿದ್ದು ಅರಮನೆನಗರಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ.
ಇವರು ಅಭಿವೃದ್ಧಿ ಪಡಿಸಿದ ಆ್ಯಪ್ ಅನ್ನು ಅಮೇರಿಕಾ ಸರಕಾರ ಕೋಟಿ ಕೋಟಿ ದುಡ್ಡು ಕೊಟ್ಟು ತಗೊಂಡಿದೆ!
ಹೌದು, ಅಮೆರಿಕಾದಲ್ಲಿ ಏರ್ಪೋರ್ಟ್ ಸೆಕ್ಯುರಿಟಿಗಾಗಿ ಆ್ಯಪ್ ಸಿದ್ದಪಡಿಸಲಾಗಿದೆ. ಏರ್ಪೋರ್ಟ್ ಗಳಲ್ಲಿ ಪ್ಯಾಸೆಂಜರ್ ಗಳನ್ನು ಚೆಕ್ ಪಾಯಿಂಟ್ ಗೆ ಹೋಗಲು ಸೂಚಿಸುತ್ತೆ ಈ ಕೋಟಿ ಬೆಲೆ ಬಾಳುವ
ಆ್ಯಪ್! ಸೆಕ್ಯುರಿಟಿ ಚೆಕ್ಕಿಂಗ್ ಗೆ ಪ್ಯಾಸೆಂಜರ್ ಎಡಕ್ಕೆ ಹೋಗ್ಬೇಕೋ ಬಲಕ್ಕೆ ಹೋಗ್ಬೇಕಾ? ಅಂತ ಸೂಚಿಸುತ್ತೆ ಅಷ್ಟೇ! ಈ ಆ್ಯಪ್ ಡೆವಲಪ್ ಮಾಡೋಕೆ ನಮ್ ಸಂದೇಶ್ ತಗೊಂಡಿದ್ದು ಕೇವಲ 4 ನಿಮಿಷ ಮಾತ್ರ!
ಸೂಪರ್ ಗುರು, ನಾಲ್ಕು ನಿಮಿಷಕ್ಕೆ ಕೋಟಿ ಕೋಟಿ ದುಡ್ಡು ಮಾಡ್ಬಹುದಲ್ಲಾ! ಐಬಿಎಂಗೆ ಸಂದೇಶ್ ಅಷ್ಟು ದುಡ್ಡು ತಂದುಕೊಟ್ರು, ಸಂದೇಶ್ ಗೆ.ಎಷ್ಟು.ಸಿಗ್ತೋ ಗೊತ್ತಿಲ್ಲ.! ಬಟ್ ತಲೆ ಇದ್ರೆ ಏನ್ ಬೇಕಾದ್ರು ಮಾಡಬಹುದು ಅಂತ ತೋರಿಸಿಕೊಟ್ಟಿದ್ದಾರೆ! ಅಮೇರಿಕಾ ಬಹಳ ಮುಂದಿದೆ, ಜಗದ ಹಿರಿಯಣ್ಣ ಅಂತೆಲ್ಲಾ ಕೊಚ್ಚಿಕೊಳ್ಳುತ್ತೆ! ಆದ್ರೆ ನಮ್ ಹುಡುಗರ ಟ್ಯಾಲೆಂಟ್ ಮುಂದೆ ಅಮೇರಿಕಾ ಏನು ಇಲ್ಲ! ನಾಲ್ಕು ನಿಮಿಷದಲ್ಲಿ ಭಾರತೀಯರು ಶೋಧಿಸುವುದನ್ನು ನಾಲ್ಕು ವರ್ಷ ಕಳೆದರೂ ಅಮೆರಿಕಾಕ್ಕೆ ಆಗಲ್ಲ. !
Video :
POPULAR STORIES :
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!
ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?