ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!

Date:

ಬೀದರ್ ನ ಒಂದು ಗಲ್ಲಿಯಲ್ಲಿರೊ ಅಂಗಡಿಗೆ ಜನರು ತಂಡೋಪ ತಂಡವಾಗಿ ನುಗ್ತಾ ಬರ್ತಿದಾರೆ. ಜನರ ನಿಯಂತ್ರಣ ತಪ್ಸೋಕೆ ಪೊಲೀಸ್ ನೆರೆವು ಪಡೆದ್ರೂ ಸಹ ಜನರ ಸಂಖ್ಯೆ ಮಾತ್ರ ಕಡಿಮೆಯೇ ಆಗಿಲ್ಲ. ಅಷ್ಟಕ್ಕೂ ಆ ಅಂಗಡಿಯಾದ್ರೂ ಯಾವ್ದು ಅಂತೀರ..? ಅದೊಂದು ಸೀರೆ ಅಂಗಡಿ..! ಸೃಷ್ಠಿ-ದೃಷ್ಠಿ ಹೆಸರಿನ ಈ ಸ್ಯಾರಿ ಸೆಂಟರ್‍ನಲ್ಲಿ ಮಹಿಳೆಯರದ್ದೇ ಕಾರು ಬಾರು. ಯಾಕೆ ಅಂತೀರಾ..? ಈ ಅಂಗಡಿಯಲ್ಲಿ ಒಂದು ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..! ಆಶ್ಚರ್ಯ ಆಯ್ತಾ..! ಅಂಗಡಿ ಮಾಲಿಕನಿಗೆ ತಲೆ ಕೆಟ್ಟು ಈ ರೀತಿ ಮಾಡ್ತಾ ಇದಾನೆ ಅನ್ಕೊಳ್ಬೇಡಿ. ಈ ಅಂಗಡಿಯ ಮಾಲಿಕ ಪ್ರಧಾನಿ ಮೋದಿ ಅವರ ಬಿಗ್ ಫ್ಯಾನ್..! ಮೋದಿ ಅವರ ನೋಟು ನಿಷೇಧ ಬೆಂಬಲಿಸಿ ಸೃಷ್ಠಿ-ದೃಷ್ಟಿ ಅಂಗಡಿ ಮಾಲಿಕ ಚಂದ್ರಶೇಖರ್ ಪಸರಗೆ ಕೇವಲ 1ರೂ. ಹಾಗೂ 2 ರೂಗೆ ಸೀರೆ ಮಾರಾಟ ಮಾಡ್ತಾ ಇದ್ದಾನೆ..! ಇದನ್ನು ಕೊಳ್ಳಲು ಕೇವಲ ಬೀದರ್‍ನ ಜನ ಮಾತ್ರವಲ್ಲ, ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಜನರ ದಂಡೆ ಈ ಸೀರೆ ಅಂಗಡಿಗೆ ಭೇಟಿ ಕೊಡ್ತಾ ಇದೆ. ಕೆಳೆದ ಡಿಸೆಂಬರ್ 6ರಿಂದ ಅತೀ ಕಡಿಮೆ ಬೆಲೆ ಸೀರೆ ಮಾರಾಟ ಆರಂಭಿಸಿದ ಇವರು ದಿನಕ್ಕೆ 4 ರಿಂದ 5 ಸಾವಿರ ಸೀರೆಗಳು ಮಾರಾಟವಾಗ್ತಾ ಇದ್ಯಂತೆ..! ಇವರ ಗುರಿ ಒಂದು ಲಕ್ಷ ಸೀರೆ ಮಾರಾಟವಾಗ್ಬೇಕಂತೆ ಅಲ್ಲಿಯವರೆಗೂ 100, 200ರೂ ಬೆಲೆಯ ಸೀರೆಗಳನ್ನು ಕೇವಲ 1ರೂ. ಮಾರಾಟ ಮಾಡ್ತಾನೆ ಇರ್ತಾರಂತೆ ನೋಡಿ..! ಈಗಾಗ್ಲೆ ಸೂರತ್‍ನಿಂದ 1 ಲಕ್ಷ ಸೀರೆಗಳನ್ನು ಆಮದು ಮಾಡ್ಕೊಂಡಿದ್ದು, ಡಿಸೆಂಬರ್ ಅಂತ್ಯದವರೆಗೂ ಮಾರಾಟ ಮಾಡಲಾಗುವುದು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...