ಬಾಲಿವುಡ್‍ನ ಬಹು ನಿರೀಕ್ಷಿತ ಚಿತ್ರ ಪದ್ಮಾವತಿ ಸಿನಿಮಾ ಬಿಡುಗಡೆಗೆ ವಿರೋಧ ಹೆಚ್ಚಾಗುತ್ತಿದ್ದು, ಇದೀಗ ಬಿಜೆಪಿ ನಾಯಕರೊಬ್ಬರು ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಪದ್ಮಾವತಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆಯ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ ಬಹುಮಾನ ನೀಡ್ತೀವಿ ಅಂತ ಹರಿಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಘೋಷಿಸಿದ್ದಾರೆ…!
ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥರಾಗಿರೋ ಸೂರಜ್ ಪಾಲ್ ಅಮು ದೀಪಿಕಾ ಹಾಗೂ ಬನ್ಸಾಲಿ ಶಿರಚ್ಛೇದ ಮಾಡುವವರಿಗೆ ಬಹುಮಾನ ಘೋಷಿಸಿದ್ದಲ್ಲದೆ, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದದಲ್ಲಿ ನಟಿಸಿರುವ ರಣವೀರ್ ಸಿಂಗ್ ಅವರ ಕಾಲುಗಳನ್ನು ಮುರಿಯುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ…!