12ನೇ ಆಟಗಾರನಾಗಿ ಬಂದ್ರೂ ರಾಹುಲ್ ಸೆಂಚುರಿ ಬಾರಿಸ್ತಾರೆ..! ಹೀಗೆಂದಿದ್ದು ಯಾರು?

Date:

ಕನ್ನಡಿಗ ಕೆ.ಎಲ್ ರಾಹುಲ್ ಸದ್ಯ ವಿಶ್ವಕ್ರಿಕೆಟ್​ ನಲ್ಲಿ ವಿರಾಜಿಸುತ್ತಿರುವ ಯುವತಾರೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ರಾಹುಲ್ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಯಲ್ಲಿ 5ನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ತನ್ನಲ್ಲೊಬ್ಬ ಅದ್ಭುತ ಬ್ಯಾಟ್ಸ್​ಮನ್, ಒಳ್ಳೆಯ ವಿಕೆಟ್ ಕೀಪರ್ ಮಾತ್ರವಲ್ಲ ಒಬ್ಬ ನಾಯಕನೂ ಇದ್ದಾನೆ ಎಂಬುದನ್ನು ಸಾಬೀತು ಪಡಿಸಿದ್ದರು.
ಭಾರತ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖಪಾತ್ರವಹಿಸಿದ್ದ ರಾಹುಲ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಟಿ20ಯಲ್ಲಿ ಆರಂಭಿಕರಾಗಿ ಹೊಣೆಗಾರಿಕೆ ನಿಭಾಯಿಸಿದ್ದ ರಾಹುಲ್ ಏಕದಿನ ಸರಣಿಯಲ್ಲಿ 5 ಕ್ರಮಾಂಕಕ್ಕೆ ಬಲ ತುಂಬಿದ್ರು. 3 ಪಂದ್ಯಗಳ ಸರಣಿಯಲ್ಲಿ ಭಾರತ ಮೂರೂ ಪಂದ್ಯ ಸೋತರೂ ರಾಹುಲ್ ಆಟದ ಬಗ್ಗೆ ಯಾರೂ ಕೆಮ್ಮಂಗಿಲ್ಲ.
ಮೊದಲ ಪಂದ್ಯದಲ್ಲಿ ಸ್ಫೋಟಕ ಅಜೇಯ 88ರನ್ ಬಾರಿಸಿದ್ದ ರಾಹುಲ್, ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್​ ಗಿಳಿದು ಶತಕ ಬಾರಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೂಡ ರಾಹುಲ್​ ಬಗ್ಗೆ ಗುಣಗಾನ ಮಾಡಿದ್ದಾರೆ. ರಾಹುಲ್ 12ನೇ ಆಟಗಾರನಾಗಿ ಬಂದ್ರೂ ಸೆಂಚುರಿ ಬಾರಿಸುತ್ತಾರೆಂದು ಅವರು ಹೇಳಿದ್ದಾರೆ.
ಹೀಗೆ ರಾಹುಲ್ ಆಟಕ್ಕೆ ಶಹಬ್ಬಾಶ್ ಎಂದವರು ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶಿಖರ್ ಧವನ್. ಯಾವ್ದೇ ಕ್ರಮಾಂಕದಲ್ಲೂ ಅದ್ಭುತ ಪ್ರದರ್ಶನ ನೀಡುವ ರಾಹುಲ್ ಅವರ ಸಾಮಾರ್ಥ್ಯವನ್ನು ಹೀಗೆ ಹಾಡಿ ಹೊಗಳಿದ್ದಾರೆ.

Share post:

Subscribe

spot_imgspot_img

Popular

More like this
Related

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ...

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...