ಬೌನ್ಸ್ ಎಂಬ ಸಂಸ್ಥೆ ಕರ್ನಾಟಕದಾದ್ಯಂತ ವಿಸ್ತಾರವಾಗಿ ಹಬ್ಬಿದೆ ರೆಂಟ್ ಬೈಕ್ ಅ್ಯಪ್ ಮುಲಕ ಬುಕ್ ಮಾಡಿಕೊಂಡು ಬಳಸಬಹುದಾದ ಹೊಸ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಗಳಿಸಿತ್ತು ಇದೀಗ ಬೌನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕೆಲ ಸಮಯಗಳ ಹಿಂದೆ ರಿಕ್ಷಾ ಚಾಲಕರು ಮತ್ತು ಮಾಲಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಪರವಾನಿಗೆ ಇಲ್ಲದ ಬೌನ್ಸ್ ದ್ವಿಚಕ್ರ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪೌರಾಯುಕ್ತರಿಗೆ ಸೂಚನೆ ನೀಡಿದ್ದರು.
ಉಡುಪಿ ಮತ್ತು ಮಣಿಪಾಲದಲ್ಲಿ ಒಟ್ಟು 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಈ ತಂಡದಲ್ಲಿ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ನಂಬಿಯಾರ್ ಮತ್ತು ಉಡುಪಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ, ಸ್ಯಾನಿಟರಿ ಸೂಪರ್ವೈಸರ್ ದಾಮೋದರ ಮೊದಲಾದ ವರು ಭಾಗವಹಿಸಿದ್ದರು.