15 ವರ್ಷ ಹೋರಾಡಿ 50 ಹೆಕ್ಟೇರ್ ಅರಣ್ಯ ರಕ್ಷಿಸಿದ ವೃಕ್ಷಮಾತೆ..!

Date:

ಜೀವನದಲ್ಲಿ ಅದೇನೇ ಎದುರಾದ್ರು ದಿಟ್ಟತನದಿಂದ ಎದುರಿಸಿ, ಗೂಡು ಬಿಟ್ಟರು ಗುರಿ ಬಿಡದೆ, ಕಂಡ ಕನಸುಗಳನ್ನು ಪೋಷಿಸಿ ಅವುಗಳನ್ನು ಸಾಧಿಸಿ ಮಾದರಿಯಾದ ಮಹಿಳಾಮಣಿಯರು ನಮ್ಮಲ್ಲಿದ್ದಾರೆ. ಅಂತಹವರಲ್ಲಿ ಒಬ್ಬರು ಈ ಸಾಧಕಿ.ಸಾಧನೆಗೆ ಲಿಂಗಬೇಧವಿಲ್ಲ, ಜಾತಿಬೇಧವಿಲ್ಲ, ವಯಸ್ಸಿನ ಹಂಗಿಲ್ಲ. ಎಷ್ಟೋ ಮಹಿಳೆಯರು ಸಾವಿಗೂ ಹೆದರದೆ ಸವಾಲುಗಳಿಗೇ ಸವಾಲೆಸೆದು ಸಾಧಿಸಿ ಸೈ ಅನಿಸಿಕೊಂಡಿದ್ದಾರೆ. ಅಂತಹವರಲ್ಲಿ ‘ಲೇಡಿ ಟಾರ್ಜನ್’ ಎಂದೇ ಖ್ಯಾತರಾದ ಜಮುನಾ ತುಡು ಕೂಡ ಒಬ್ಬರು.ಹೌದು, ಯಾವುದೇ ಪ್ರಗತಿ ಬಿಂಬಿತವಾಗುವುದು ಗುಣಮಟ್ಟದ ಬುದುಕಿನ ಶೈಲಿ, ಮಹಿಳೆಗೆ ಸಿಗುವ ಗೌರವ, ಸುರಕ್ಷತೆ ಹಾಗೂ ಅಪರಾಧ ಮುಕ್ತ ಸಮಾಜದಿಂದ ಮಾತ್ರ . ಉತ್ತಮ ಸಮಾಜ ನಿರ್ಮಾಣವಾಗುತ್ತೆ. ಅದೇ ರೀತಿ, ಅರಣ್ಯ ಸಂರಕ್ಷಣೆಯೇ ಮುಂದಿನ ಪೀಳಿಗೆಯ ಅಡಿಪಾಯ, ಜಾರ್ಖಂಡ್​ನ ಜಮುನಾ ತುಡು ಗ್ರಾಮದ ಅರಣ್ಯದ ಸುಭದ್ರತೆಗೆ ತನ್ನ ಜೀವನವನ್ನೆ ಮುಡಿಪಾಗಿಟ್ಟು ರಕ್ಷಿಸಿದ ಮಹಾತಾಯಿ.ಈಕೆ ಜಾರ್ಖಂಡ್ ನಲ್ಲಿ ಮತುರ್ಖಮ್ ಲೇಡಿ ಟಾರ್ಜನ್ ಅಂತಾನೇ ಫೇಮಸ್.ಹಲವಾರು ವರ್ಷಗಳಿಂದ ಜಮುನಾ ತುಡು ಗ್ರಾಮದ ಅರಣ್ಯ ಪ್ರದೇಶ, ಕಳ್ಳಕಾಕರ ಮಾಫಿಯಾದ ಆಡಳಿತಕ್ಕೆ ತುತ್ತಾಗಿತ್ತು. ಅರಣ್ಯ ಪ್ರದೇಶದ ಜೊತೆಗೆ ಈ ಗ್ರಾಮವೂ ಕಾಡುಗಳ್ಳರ ನಾಡಾಗಿ ಮಾರ್ಪಟ್ಟಿತ್ತು. ಕಳ್ಳರ ಗ್ಯಾಂಗ್,​ ಇಲ್ಲಿರುವ ಅಪಾರವಾದ ಮರಗಳನ್ನು ಕಡಿದು ಮಾರಾಟ ಮಾಡ್ತಿತ್ತು .ಜೊತೆಗೆ ಪ್ರಾಣಿಗಳ ಸಂಪತ್ತನ್ನು ಸಹ ನಾಶ ಮಾಡುತ್ತಾ ಬರ್ತಿದ್ರು.ಜಮುನಾ ತುಡು ಗ್ರಾಮದ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದ ಸಾಲ್ ಅರಣ್ಯ ಪ್ರದೇಶವನ್ನು ಮಾಫಿಯಾದವರು ತನ್ನ ಹಿಡಿತಕ್ಕೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿದ್ರು. ಅರಣ್ಯದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದ್ದ ಮರಗಳನ್ನು ತಮ್ಮ ಸ್ವಾರ್ಥಕ್ಕೆ ಬಲಿಕೊಡುತ್ತಿದ್ದರು. ಅಪರೂಪದ ಸಸ್ಯಗಳು, ವಿವಿಧ ಪ್ರಬೇಧದ ಬೆಲೆ ಬಾಳುವ ಮರಗಳಿಂದ ತುಂಬಿದ್ದ ಸಾಲ್ ಅರಣ್ಯ ಪ್ರದೇಶ ಮಾಫಿಯಾದವರ ಅವರಿಸಿಕೊಂಡರೂ, ಕಳ್ಳರ ದಷ್ಚಟಗಳ ತಾಣವಾದ್ರೂ ಅಲ್ಲಿನ ಜನರು ಅದರ ಬಗ್ಗೆ ಧ್ವನಿ ಎತ್ತುತ್ತಿರುತ್ತಿರಲಿಲ್ಲ. ಧ್ವನಿ ಎತ್ತುವ ಧೈರ್ಯವೂ ಅವರಿಗೆ ಇರಲಿಲ್ಲ.ಜುಮುನಾ ತುಡು ಅವರಿಗೆ ಬಾಲ್ಯದಿಂದಲೂ ಗಿಡ ಮರಗಳ ಮೇಲೆ ಅಪಾರವಾದ ಪ್ರೀತಿ ಇತ್ತು. ಆ ಪ್ರೀತಿಯೇ ಇವತ್ತು 50 ಹೆಕ್ಟೇರ್ ಪ್ರದೇಶದ ಅರಣ್ಯವನ್ನು ಕಳ್ಳರಿಂದ ರಕ್ಷಿಸಿರೋದು ಎಂದರೆ ತಪ್ಪಾಗಲ್ಲ.ಈ ಗ್ರಾಮಕ್ಕೆ ಸೊಸೆಯಾಗಿ ಬಂದಾಗ ಇವ್ರಿಗೆ ಬರೀ 17 ವರ್ಷ. ಅರಣ್ಯ ಸಂಪತ್ತನ್ನು ರಕ್ಷಿಸಿ ಗ್ರಾಮದ ಸೊಸೆಯಗಿದ್ದ ಇವರು ಈಗ ವನದೇವತೆಯಾಗಿದ್ದಾರೆ.

ಆಕ್ರಮಿಸಿಕೊಂಡು ಮೆರೆಯುತ್ತಿದ್ದ ಮಾಫಿಯದವರ ವಿರುದ್ಧ ಯುದ್ಧ ಮಾಡಿ ವೀರವನಿತೆಯಾಗಿದ್ದಾರೆ. ಇಲ್ಲಿ ನಡೆಯುತ್ತಿದ್ದ ಅಕ್ರಮ ಮರ ಸಾಕಾಣಿಕೆ, ಮತ್ತು ಅರಣ್ಯ ನಾಶವನ್ನು ತಡೆಗಟ್ಟಲು ನಿರ್ಧರಿಸಿದ ಜಮುನಾ ತುಡು ‘ವನ ಸುರಕ್ಷ ಸಮಿತಿ’ ಎನ್ನುವ ಸಂಘ ಕಟ್ಟಿ ಅದಕ್ಕೆ 25 ಮಹಿಳೆಯರನ್ನು ಸದಸ್ಯರನ್ನಾಗಿ ಸೇರಿಸಿಕೊಂಡರು. ಕಳ್ಳರ ವಿರುದ್ಧ ಹೋರಾಡುವ ತರಬೇತಿಯನ್ನು ನೀಡುತ್ತಾ ಎಲ್ಲರಿಗೂ ಧೈರ್ಯ ತುಂಬಿದ್ರು.25 ಮಹಿಳೆಯರು ಕೂಡ ತಾವೇ ಸ್ವತಃ ಬಿಲ್ಲು ಬಾಣ, ಲಾಠಿ ಹಾಗೂ ಭರ್ಜಿಗಳನ್ನು ಸಿದ್ಧಪಡಿಸಿಕೊಂಡರು. ಮರ ಕಡಿಯುವವರ ಮೇಲೆ ಬಿಲ್ಲು ಇವುಗಳೇ ಆಯುಧಗಳಾಗಿ ಪ್ರಹಾರ ಮಾಡಿದವು. ಅರಣ್ಯ ಯುದ್ಧ ನಡೆದಿದ್ದು ಒಂದೆರಡು ದಿನಗಳಲ್ಲ ಬರೋಬ್ಬರಿ 15 ವರ್ಷಗಳ ಕಾಲ. ಸರಿ ಸುಮಾರು 15 ವರ್ಷಗಳ ಕಾಲ ಊಟ ನಿದ್ದೆ ಸರಿಯಾಗಿ ಮಾಡದೇ ಕಾಡಿನಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಆಕ್ರಮ ಮಾಡಿದರ ವಿರುದ್ಧ ಹೋರಾಡಿ ರಕ್ಷಿಸಿದ್ದು 50 ಹೆಕ್ಟೇರ್ ಅರಣ್ಯ ಪ್ರದೇಶವನ್ನು..!3 ಪಾಳಿಯಲ್ಲಿ ಈ ಮಹಿಳೆಯರು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದರು. ಇದನ್ನು ಕೇಳಿದರೆ ಎಂಥವರಿಗೂ ರೋಮಾಂಚನವಾಗುತ್ತದೆ. ದಟ್ಟಾರಣ್ಯದಲ್ಲಿ ರಾತ್ರಿ ವೇಳೆಯಲ್ಲಿ ಗಸ್ತು ತಿರುಗುವುದೆಂದರೇ ತಮಾಷೆ ಮಾತಾಗಿರಲಿಲ್ಲ. ಅದು ಮಹಿಳೆಯರು ಗಸ್ತು ತಿರುಗುತ್ತಿದ್ದರು ಎಂದರೆ ಇವರ ಧೈರ್ಯಕ್ಕೆ ಎಂಥವರೂ ಮೆಚ್ಚಲೇಬೇಕು. ಇವರಿಗೆ 2014 ರ ಶ್ರೆರಿ ಶಕ್ತಿ ಪ್ರಶಸ್ತಿ, ಮತ್ತು 2013 ಗಾಡ್ಫ್ರೇ ಫಿಲಿಪ್ಸ್ ಬ್ರೇವರಿ ಅವಾರ್ಡ್ ನೀಡಲಾಯಿತು. ಎನ್ಐಟಿಐ ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಪ್ರಶಸ್ತಿ 2017 ಗೆ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೇ ಇವರ ಸಾಧನೆಗೆ ತಲೆಬಾಗಿದ ಅರಣ್ಯ ಇಲಾಖೆ ಇವರ ಗ್ರಾಮವನ್ನು ದತ್ತು ಪಡೆದು ನೀರಿನ ಸಂಪರ್ಕ ಹಾಗೂ ಒಂದು ಶಾಲೆಯನ್ನು ಕಟ್ಟಿಸಿಕೊಟ್ಟಿದೆ. ಒಟ್ಟಾರೆಯಾಗಿ ಜಮುನಾ ತುಡು ಕಳ್ಳರಿಂದ ಅರಣ್ಯವನ್ನು ರಕ್ಷಿಸಿ, ಇಡೀ ಸರ್ಕಾರವನ್ನೇ ತಮ್ಮ ಗ್ರಾಮದತ್ತ ತಿರುಗಿ ನೋಡುವಂತೆ ಮಾಡಿರೋದು ಶ್ಲಾಘನೀಯ.

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...