ಬೆಂಗಳೂರು:- ಕಾಂಗ್ರೆಸ್ ನಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕೈ ಶಾಸಕ ಬಸವರಾಜ್ ರಾಯರೆಡ್ಡಿ ಆರೋಪಕ್ಕೆ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಸವರಾಜ ರಾಯರೆಡ್ಡಿ ನಾನು ಹೇಳಿಲ್ಲ ಅಂದಿದ್ದಾರಲ್ಲ. ನಾನೊಮ್ಮೆ ಅವರ ಬಳಿ ಚರ್ಚೆ ಮಾಡ್ತೇನೆ ಎಂದರು. ಇನ್ನೂ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದವರು ಲೋಕಾಯುಕ್ತಕ್ಕೋ ಪೊಲೀಸರಿಗೋ ದೂರು ನೀಡಲಿ. ಬರೆದು ದೂರು ಕೊಡಲಿ ತನಿಖೆ ಮಾಡಿಸೋಣ. ಇಂಥದ್ದು ಅಂತ ಬರೆದು ಕೊಡಲಿ ತನಿಖೆ ಮಾಡಿಸೋಣ. ಯಾವ ಸ್ಪೆಷಲ್ ಎಲ್ಓಸಿ ಇಲ್ಲ ಏನೂ ಇಲ್ಲ. ನಾವು ಮಾಡಿದರೆ 10% ಸ್ಪೆಷಲ್ ಎಲ್ಓಸಿ ಸ್ಯಾಂಕ್ಷನ್ ಮಾಡಬಹುದು ಅಷ್ಟೇ. ನನ್ನ ಇಲಾಖೆ ಮೇಲೆ ಆರೋಪ ಮಾಡಿದ್ದರೂ ಸಂತೋಷ ದೂರು ಕೊಡಲಿ.ಹತ್ತಾರು ಜನ ಬಂದು ಅರ್ಜಿ ಕೊಡ್ತಾರೆ, ಲಿಖಿತ ರೂಪದಲ್ಲಿ ಕೊಡಲಿ ತನಿಖೆ ಮಾಡಿಸೋಣ ಎಂದರು.
ಇದೇ ವೇಳೆ ಶಿರಾದಲ್ಲಿ 2ನೇ ಏರ್ಪೋರ್ಟ್ ಮಾಡುವಂತೆ ಕೈ ಶಾಸಕರಿಂದ ಸಹಿ ಸಂಗ್ರಹ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಡದಿಯಲ್ಲಿ ಮಾಡಿ ಅಂತಾ ನಾನು ಹೇಳಿಲ್ಲ. ನನ್ನ ಜೊತೆ ಯಾರೂನು ಚರ್ಚೆನೂ ಮಾಡಿಲ್ಲ. ಕರ್ನಾಟಕದಲ್ಲಿ ಎಲ್ಲೇ ಆದ್ರೂ ಸಂತೋಷ. ನಾನು ಅಖಂಡ ಕರ್ನಾಟಕದ ಮೇಲೆ ನಂಬಿಕೆ ಇಟ್ಟವನು. ನನಗೆ ಚಾಮರಾಜನಗರವೂ ಒಂದೇ ಬೀದರ್ ಗುಲ್ಬರ್ಗವೂ ಒಂದೇ ಎಂದರು.