2000 ಮುಖಬೆಲೆಯ ನೋಟು ಬರೀ ಸುಳ್ ಸುದ್ದಿ..?

admin
By admin
1 Min Read

ಕಳೆದೊಂದು ವಾರಗಳಿಂದ ಟ್ವಿಟರ್, ಫೇಸ್ ಬುಕ್, ವಾಟ್ಸಾಪ್‍ಗಳಲ್ಲಂತೂ 2000 ಸಾವಿರ ಮುಖಬೆಲೆಯ ಬಂಡಲ್ ಕಟ್ಟುಗಳು ಎಲ್ಲೆಡೆ ಸಂಚಲನ ಮೂಡಿಸಿರೋದು ಪ್ರಸ್ತುತದ ಸತ್ಯ. ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನು ಕೆಲವೇ ದಿನಗಳಲ್ಲಿ 2000 ಮುಖಬೆಲೆಯ ನೋಟುಗಳು ಬಿಡುಗಡೆ ಮಾಡಲಿದೆ ಎಂಬ ಗಾಸಿಪ್ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ಬಿಟ್ಟಿದೆ.. ಈ ವಿಶ್ಯ ಕೇಳಿದ ಕೆಲವರಂತೂ ಹೌದಾ..! ಅಂತ ತಲೇಲಿ ಹುಳ ಬಿಟ್ಕೊಂಡು ಯಾವತ್ತಪ್ಪಾ ಬರತ್ತೆ ಅಂತ ಚಿಂತೆ ಮಾಡ್ತಾ ಇದ್ರೆ, ಇನ್ನು ಕೆಲವ್ರು ಅದಕ್ಕಿಂತ ಸ್ವಲ್ಪ ಮುಂದೆಹೋಗಿ ಎಲ್ರಿಗೂ ಶೇರ್ ಮಾಡ್ತಾ ಇದಾರೆ..! ಆದ್ರೆ ವಾಸ್ತವ ಸಂಗತಿ ಏನಪ್ಪಾ ಅಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲೂ ಕೂಡ 2000 ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡಲಿದ್ದೇವೆ ಎಂಬ ಯಾವುದೇ ಪ್ರಕಟಣೆಯನ್ನೂ ಮಾಡಿಲ್ಲ.. ಹಾಗಾದ್ರೆ ಈ ಬಂಡಲ್ ಗಟ್ಟಲೆ ನೋಟುಗಳು ಆರ್‍ಬಿಐನಿಂದ ಸೋರಿಕೆಯಾಗಿರೋದೇ..? ಅಥವಾ ಇದು ಸುಳ್ಳು ಸುದ್ದಿನಾ..? ಅನ್ನೋದು ಈವರೆಗಿನ ಯಕ್ಷ ಪ್ರಶ್ನೆ ಅಷ್ಟೇ..! ಆರ್‍ಬಿಐ 2000 ಮುಖಬೆಲೆ ನೋಟುಗಳನ್ನು ಚಲಾವಣೆ ಮಾಡಲು ಮುಂದಾಗಿದೆ. ಈಗಾಗಲೇ ಮೈಸೂರಿನಲ್ಲಿರುವ ಆರ್‍ಬಿಐ ಠಂಕ ಶಾಲೆಯಲ್ಲಿ ನೋಟು ಮುದ್ರಣ ಕಾರ್ಯ ನಡಿತಿದೆ. ಆದಷ್ಟು ಬೇಗ ಈ ನೋಟುಗಳು ಬಿಡುಗಡೆಯಾಗಲಿದೆ ಎಂಬ ವದಂತಿ ಇದೆ ಬಿಟ್ರೆ ಈ ಕುರಿತಾಗಿ ಕೇಂದ್ರ ಸರ್ಕಾರವಾಗ್ಲಿ.. ಅಥವಾ ಆರ್‍ಬಿಐ ಆಗಲೀ ಯಾವುದೇ ಅಧಿಕೃತ ಘೋಷಣೆ ಹೊರ ಹಾಕಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವದಂತಿ ಕೇಳಿ ಮಾರು ಹೋಗಬೇಡಿ ಅಷ್ಟೆ.

Like us on Facebook  The New India Times

POPULAR  STORIES :

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

Share This Article