2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಮಹೇಂದ್ರ ಸಿಂಗ್ ಧೋನಿ ಚಾಣಾಕ್ಷ ನಾಯಕ ಎಂಬುದನ್ನು ಇಡೀ ವಿಶ್ವ ಕ್ರಿಕೆಟ್ ಒಪ್ಪಿದೆ . ಆಯಾ ಸಂದರ್ಭಕ್ಕೆ ತಕ್ಕಂತೆ ತತ್ ಕ್ಷಣದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ತೆಗೆದು ಕೊಳ್ಳುತ್ತಿದ್ದ ತೀರ್ಮಾನಗಳು ಗಮನಾರ್ಹ ಮತ್ತು ಪ್ರಂಶಸನಾರ್ಹ …
ಇನ್ನು ಧೋನಿ ನಾಯಕತ್ವದಲ್ಲಿ ಭಾರತ 2007 ರ ಟಿ20 ಚೊಚ್ಚಲ ವಿಶ್ವಕಪ್ ಗೆದ್ದಿದ್ದು, 2011 ರ ಏಕದಿನ ವಿಶ್ವಕಪ್ ಜಯಸಿದ್ದು ಕೂಡ ಇತಿಹಾಸ .
2011 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಒಡ್ಡಿದ್ದ ಗುರಿ ಬೆನ್ನತ್ತಿದ ಭಾರತ 28.2 ಓವರ್ ಗಳಲ್ಲಿ 161 ರನ್ ಬೇಕಿದ್ದಾಗ ತಂಡದ ಮೂರು ವಿಕೆಟ್ ಹೋಗಿತ್ತು . ವಿರಾಟ್ ಕೊಹ್ಲಿ ಔಟಾದಾಗ ಯುವರಾಜ್ ಸಿಂಗ್ ಕ್ರಿಸಿಗಿಳಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಟೂರ್ನಿಯುದ್ಧಕ್ಕೂ ಅದ್ಭುತ ಫಾರ್ಮ್ ನಲ್ಲಿದ್ದ ಯುವಿ ಕ್ರಮಾಂಕದಲ್ಲಿ ಬದಲಾವಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ . ಆದರೆ, ಕೊಹ್ಲಿ ಔಟಾಗುತ್ತಿದ್ದಂತೆ ಯುವಿ ಬದಲು ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ಹಿಡಿದು ಬಂದರು . ಧೋನಿ ಆರಂಭಿ ಗಂಭೀರ್ ಜೊತೆಗೂಡಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಗೌತಿ ಶತಕ ವಂಚಿತರಾಗಿ ಪೆವಿಲಿಯನ್ ಸೇರಿದ ಮೇಲೆ ಯುವಿ ಕಣಕ್ಕಿಳಿದರು. ಧೋನಿ ಯುವಿಯೊಡನೆ ತಂಡವನ್ನು ಗೆಲುವಿನ ದಡ ಸೇರಿಸಿ 2 ನೇ ಏಕದಿನ ವಿಶ್ವಕಪ್ ತಂದು ಕೊಟ್ಟರು . ಧೋನಿ ಅಜೇಯ 91 ರನ್ ಬಾರಿಸಿ , ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಯುವರಾಜ್ ಸಿಂಗ್ ಸರಣಿ ಶ್ರೇಷ್ಠರಾದರು …!
ಇನ್ನು ಧೋನಿ ಉತ್ತಮ ಆಟದಿಂದ ಹಾಗೂ ಭಾರತ ಗೆದ್ದಿದ್ದರಿಂದ ಯುವಿ ಕ್ರಮಾಂಕದ ಬದಲಾವಣೆ ಚರ್ಚೆ ಆಗಲಿಲ್ಲ. ಟೀಕೆಗೂ ಗುರಿ ಆಗಲಿಲ್ಲ . ಧೋನಿ ಮಹತ್ವದ ನಿರ್ಧಾರ ಎಂದು ಬಣ್ಣಿಸಲಾಗಿತ್ತು . ಆ ನಿರ್ಧಾರಕ್ಕೆ ಕಾರಣ ಏನು ಅಂತ ಯಾರೂ ಪ್ರಶ್ನಿಸಿರಲಿಲ್ಲ . ಬಿಸಿಸಿಐ ಆಗಲಿ , ಧೋನಿ ಆಗಲಿ ಅಥವಾ ಸಂಬಂಧ ಪಟ್ಟ ಯಾರುನೂ ಆ ಬಗ್ಗೆ ಮಾತಾಡಿರಲಿಲ್ಲ .
ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆ ಬಗ್ಗೆ ಮಾತನಾಡಿದ್ದಾರೆ . ಆ ನಿರ್ಧಾರವನ್ನು ಧೋನಿಗೆ ಸೂಚಿಸಿದ್ದು ನಾನೇ ಎಂದು ಸಚಿನ್ ಹೇಳಿದ್ದಾರೆ .
ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿದ್ದರು . ಎಡ – ಬಲ ಕಾಂಬಿನೇಷನ್ ನ ಈ ಆಟಗಾರರಲ್ಲಿ ಗಂಭೀರ್ ಔಟಾದರೆ ಮತ್ತೊಬ್ಬ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಯುವರಾಜ್ ಸಿಂಗ್ , ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಔಟಾದರೆ ಬಲಗೈ ಬ್ಯಾಟ್ಸ್‌ಮನ್ ಧೋನಿ ಕಣಕ್ಕಿಳಿಯುವಂತೆ ಸೂಚಿಸಿದ್ದೆ . ಅಂತೆಯೇ ಕೊಹ್ಲಿ ಔಟಾಗಿದ್ದರಿಂದ ಧೋನಿ ಕಣಕ್ಕಿಳಿದರು . ಗಂಭೀರ್ ಔಟಾದ ಬಳಿಕ ಯುವಿ ಧೋನಿ ಜೊತೆಯಾದರು ಎಂದು ಸಚಿನ್ ತಿಳಿಸಿದ್ದಾರೆ .
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!