2019ರಲ್ಲಿ ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿಶ್ವಕಪ್ ಗೆಲ್ಲಲಿದೆ…! ಇತಿಹಾಸ ನಂಬುವುದಾದರೆ ಖಂಡಿತಾ ಇದು ಪಕ್ಕಾ… ಭವಿಷ್ಯ.
ಮಹೇಂದ್ರ ಸಿಂಗ್ ಧೋನಿ ಮದುವೆಯಾದ ಬಳಿಕ 2011ರಲ್ಲಿ ನಡೆದ ವಿಶ್ವಕಪ್ ಅನ್ನು ಅದೇ ಧೋನಿ ನೇತೃತ್ವದ ಟೀಂ ಇಂಡಿಯಾ ಜಯಿಸಿತ್ತು. ಈ ವರ್ಷ ವಿರಾಟ್ ಕೊಹ್ಲಿ ಮದುವೆಯಾಗಿದೆ. 2019ರಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆಲ್ಲಬಹುದು ಎಂದು ಭವಿಷ್ಯ ನುಡಿಯಲಾಗಿದೆ.
ಹೀಗೆಂದು ‘ಇನ್ ಖಬರ್’ ಹಿಂದಿ ವಾಹಿನಿ ಟ್ವೀಟ್ ಮಾಡಿದೆ. ಈ ಟ್ವೀಟನ್ನು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಬಿಸಿಸಿಐ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಮೊಹಮದ್ ಅಜರುದ್ದೀನ್, ರಾಜೀವ್ ಶುಕ್ಲಾ, ರವಿಶಾಸ್ತ್ರೀ, ಅಜಯ ಜಡೇಜಾ, ಅನುರಾಗ್ ಠಾಕೂರ್, ಶರಾದ್ ಪವರ್, ಗೌತಮ್ ಗಂಭೀರ್ ಅವರಿಗ ಟ್ಯಾಗ್ ಮಾಡಲಾಗಿದ್ದು, ಮಹೇಂದ್ರ ಸಿಂಗ್ ಧೋನಿ ಈ ಟ್ವೀಟನ್ನು ಲೈಕ್ ಮಾಡಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರು ವರ್ಷದ ಬಳಿಕ ಟ್ವೀಟ್ ಲೈಕ್ ಮಾಡಿರುವ ಟ್ವೀಟ್ ಇದು. 2009ರಲ್ಲಿ ಟ್ವೀಟ್ ಖಾತೆ ತೆರೆದಿರುವ ಧೋನಿ ಇದುವರೆಗೆ ಕೇವಲ ಮೂರು ಟ್ವೀಟ್ ಗಳನ್ನು ಮಾತ್ರ ಲೈಕ್ ಮಾಡಿದ್ದಾರೆ. 2014ರಲ್ಲಿ ಬಿಸಿಸಿ ಐ ಮಾಡಿದ್ದ ಟ್ವೀಟ್ ಒಂದನ್ನು ಲೈಕ್ ಮಾಡಿದ್ದ ಧೋನಿ ಆ ಬಳಿಕ ಇದೇ ಮೊದಲು ಟ್ವೀಟ್ ಲೈಕ್ ಮಾಡಿದ್ದಾರೆ.