2028ಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: DCM ಡಿಕೆಶಿ!
ಬೆಂಗಳೂರು:- 2028ಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ. ಅವರನ್ನು ಕೂಡ ಹೆಗಲು ಮೇಲೆ ಹೊರೋಣ. ನೋಡೋಣ ಏನಾಗುತ್ತೆ. ಹೆಣದ ಮೇಲೆ ರಾಜಕೀಯ ಬಿಟ್ಟು, ಅವ್ರೇನು ಮಾಡಿದ್ದಾರೆ? ಯಾವ ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡೋದಿಲ್ಲ. ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.
ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ಅನೇಕ ಪ್ರಕರಣಗಳನ್ನು ಕೇಳುತ್ತೇವೆ. ಗಂಗಾಧರ ಪ್ರಕರಣದ ಬಗ್ಗೆ ನಾವು ಕೇಳುತ್ತೇವೆ. ನಾನು ಅಹಮದಾಬಾದ್‌ಗೆ ಹೋಗಿದ್ದೆ. ನಾನು ಕೇಂದ್ರ ಸರ್ಕಾರವನ್ನ ಯಾವತ್ತೂ ದೂಷಿಸಿಲ್ಲ. ದೇವಾಲಯದಲ್ಲಿ ಕಾಲ್ತುಳಿತ ಆಗಿದೆ. ಅನೇಕ ಕಡೆ ಕಾಲ್ತುಳಿತ ಆಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ.