22 ದಿನ ಕೆಲಸ ಮಾಡಿ ಸಂಬಳ ಕೇಳಿದ್ರೆ ಕಪಾಳಕ್ಕೆ ಹೊಡೆದಿದ್ದ ಆ ನಿರ್ಮಾಪಕ

Date:

ದುನಿಯಾ ವಿಜಯ್.. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ಓರ್ವರು. ಈ ಹಿಂದೆ ತಮ್ಮ ಮನೋಜ್ಞ ಅಭಿನಯದಿಂದ ಅಪಾರವಾದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ವಿಜಯ್ ಕೆಲವೊಂದಿಷ್ಟು ವೈಯಕ್ತಿಕ ಕಾರಣಗಳಿಂದ ಕಾಂಟ್ರವರ್ಸಿಗೂ ಒಳಗಾಗಿದ್ದು ಇದೆ. ಹೀಗೆ ಕಾಂಟ್ರವರ್ಸಿಗೆ ಸಿಲುಕಿಕೊಂಡಿದ್ದ ದುನಿಯಾ ವಿಜಯ್ ಅವರಿಗೆ ಚಿತ್ರವನ್ನು ನಿರ್ದೇಶನ ಮಾಡಲು ಯಾರೂ ಮುಂದೆ ಬರದೇ ಇದ್ದಾಗ ಸ್ವತಃ ತಾವೇ ಪೆನ್ ಹಿಡಿದು ರಚಿಸಿದ ಚಿತ್ರವೇ ಸಲಗ!

ಹೌದು ದುನಿಯಾ ವಿಜಯ್ ಸಲಗ ಚಿತ್ರವನ್ನು ತಾವೇ ನಿರ್ದೇಶಿಸಿ ತಾವೇ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಗೆಲುವನ್ನು ಸಾಧಿಸಿದರು. ಈ ಒಂದು ಬ್ಲಾಕ್ಬಸ್ಟರ್ ಮೂಲಕ ಹಲವಾರು ಜನರಿಗೆ ಕೆಲಸ ಸಿಗುವಂತೆ ಮಾಡಿದ ದುನಿಯಾ ವಿಜಯ್ ಈ ಹಿಂದೆ ತಾವು ಮಾಡಿದ ಕೆಲಸಕ್ಕೆ ಸಂಬಳ ಕೇಳಲು ಹೋದಾಗ ನಿರ್ಮಾಪಕರೊಬ್ಬರಿಂದ ಕೆಟ್ಟ ಮಾತುಗಳನ್ನು ಕೇಳಿ ಕಪಾಳಕ್ಕೆ ಹೊಡೆಸಿಕೊಂಡಿದ್ದರಂತೆ.

ಹೌದು, ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸುವ ಮುನ್ನ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಹೀಗೆ ತಾವು ಚಿತ್ರವೊಂದಕ್ಕೆ 22 ದಿನಗಳ ಕಾಲ ಕೆಲಸವನ್ನು ಮಾಡಿದ್ದರು. ತಾನು ಮಾಡಿದ ಇಷ್ಟು ದಿನಗಳ ಕೆಲಸಕ್ಕೆ ನಿರ್ಮಾಪಕರ ಬಳಿ ಹೋಗಿ ಸಂಬಳವನ್ನು ಕೇಳಿದಾಗ ಆ ನಿರ್ಮಾಪಕ ಇಷ್ಟು ದಿನಗಳ ಕಾಲ ಕೆಲಸ ಮಾಡಿದ್ದೀಯಾ ಎಂದು ಕೇಳಿದ್ದಾರೆ. ನಿರ್ಮಾಪಕರ ಪ್ರಶ್ನೆಗೆ ಖುಷಿಯಿಂದ ಉತ್ತರಿಸಿದ ದುನಿಯಾ ವಿಜಯ್ ಇಪ್ಪತ್ತೆರಡು ದಿನ ಕೆಲಸ ಮಾಡಿದ್ದೇನೆ ಸಾರ್ ಪ್ರತಿದಿನ ನೀವು ನನಗೆ ನೂರು ರೂಪಾಯಿಗಳನ್ನು ನೀಡಿದ್ದೀರಾ ಉಳಿದ ಹಣವನ್ನು ಕೊಡಿ ಎಂದು ಕೇಳಿದ್ದಾರೆ.

ವಿಜಯ್ ಮಾತನ್ನು ಕೇಳಿದ ಆ ನಿರ್ಮಾಪಕ ನಿನ್ನ ಯೋಗ್ಯತೆಗೆ ನೂರು ರೂಪಾಯಿಯ ಹೆಚ್ಚು ಎಂದು ಕೆಟ್ಟ ಮಾತುಗಳಿಂದ ದುನಿಯಾ ವಿಜಯ್ ಅವರನ್ನು ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಹೀಗೆ ನಿರ್ಮಾಪಕರಿಂದ ಕೆಟ್ಟ ಮಾತುಗಳನ್ನು ಕೇಳಿ ಕಪಾಳಕ್ಕೆ ಹೊಡೆಸಿಕೊಂಡ ದುನಿಯಾ ವಿಜಯ್ ಅವರನ್ನು ಅಲ್ಲಿಯೇ ನೆರೆದಿದ್ದ ಮತ್ತೋರ್ವ ಸಿನಿಮಾರಂಗದ ವ್ಯಕ್ತಿ ದುನಿಯಾ ವಿಜಯ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಅವರನ್ನು ಎದುರು ಹಾಕಿಕೊಳ್ಳಬೇಡ ಚಿತ್ರರಂಗದಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಸಮಾಧಾನ ಮಾಡಿದ್ದರಂತೆ.

ಬೇಸರದ ಸಂಗತಿಯೆಂದರೆ ದುನಿಯಾ ವಿಜಯ್ ಮತ್ತು ನಿರ್ಮಾಪಕರ ನಡುವಿನ ಈ ಘಟನೆ ನಡೆದದ್ದು ಗವಿಗಂಗಾಧರೇಶ್ವರ ದೇವಸ್ಥಾನದ ಮುಂಭಾಗದಲ್ಲಿಯೇ. ಹೀಗೆ ತಾನು ಮಾಡಿದ ನಿಯತ್ತಿನ ಕೆಲಸಕ್ಕೆ ಸಂಬಳ ಕೇಳಿ ದುಡ್ಡು ಸಿಗದೇ ಕೆಟ್ಟ ಮಾತುಗಳನ್ನು ಕೇಳಿ ಹೊಡೆತವನ್ನು ತಿಂದ ದುನಿಯಾ ವಿಜಯ್ ಈ ಕೆಟ್ಟ ಅನುಭವವನ್ನು ಇತ್ತೀಚೆಗೆ ನಡೆದ ಕಲರ್ಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹಾಗೂ ಈ ವಿಷಯದ ಕುರಿತಾಗಿ ಇನ್ನೂ ಮುಂದುವರಿದು ಮಾತನಾಡಿದ ಅವರು ಅಂದು ನನಗೆ ಅವಮಾನ ಮಾಡಿದ ನಿರ್ಮಾಪಕನನ್ನು ನನ್ನ ಕಾಲ ಕೆಳಗೆ ಇರುವ ಮಟ್ಟಕ್ಕೆ ನಾನು ಬೆಳೆಯಬೇಕು ಎಂದು ತೀರ್ಮಾನ ಮಾಡಿದ್ದೆ ಹಾಗೂ ಈಗ ಅದೇ ರೀತಿ ಇಂದು ನಾನು ಬೆಳೆದಿದ್ದೇನೆ ಮತ್ತು ಆ ನಿರ್ಮಾಪಕನನ್ನು ಯಾವ ಜಾಗದಲ್ಲಿ ಇಡಬೇಕೋ ಆ ಜಾಗದಲ್ಲಿ ಇಟ್ಟಿದ್ದೇನೆ ಮತ್ತು ಆತನಿಗಿಂತ ನಾನು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೆಲ್ಲಾ ಆ ಓರ್ವ ನಿರ್ಮಾಪಕ ದುನಿಯಾ ವಿಜಯ್ ಅವರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದರು ಸಹ ವಿಜಯ್ ಮಾತ್ರ ಆ ನಿರ್ಮಾಪಕನ ಹೆಸರನ್ನು ಎಲ್ಲಿಯೂ ಕೂಡ ಬಹಿರಂಗಪಡಿಸಿಲ್ಲ. ಓರ್ವ ನಿರ್ಮಾಪಕ ನನಗೆ ದುಡ್ಡು ಕೊಡಲಿಲ್ಲ ಎಂದು ಇಲ್ಲಿಯವರೆಗೂ ಕೂಡ ರಂಪ ಮಾಡಲಿಲ್ಲ. ಆ ಅವಮಾನವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಆತನನ್ನು ಮೀರಿಸುವ ಮಟ್ಟಕ್ಕೆ ಬೆಳೆಯಬೇಕು ಎಂಬ ಗುರಿಯನ್ನು ದುನಿಯಾ ವಿಜಯ್ ಯಶಸ್ವಿಯಾಗಿ ತಲುಪಿದ್ದಾರೆ.

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...