3 ನೇ ವರ್ಷದ ಟಿಎನ್ ಐಟಿ ಅವಾರ್ಡ್ ಶೀಘ್ರದಲ್ಲೇ… ಕಳೆದ 2 ಬಾರಿ ಯಾರೆಲ್ಲಾ ಗೆದ್ದಿದ್ರು..? ಈ ಬಾರಿ ಹೇಗಿರುತ್ತೆ?
ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ಕಳೆದ ಎರಡು ವರ್ಷಗಳಿಂದ ಮೀಡಿಯಾ ಅವರ್ಡ್ಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ನಮ್ಮ ಪೋರ್ಟಲ್ ನ ಪ್ರತಿಯೊಬ್ಬ ಆ್ಯಕ್ಟಿವ್ ಯೂಸರ್ಸ್ ಕೊಡುಗೆ ಅಪಾರ. ಯಾಕಂದರೆ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಆಯೋಜಿಸಿದ್ದರೂ…ಯಾರಿಗೆ ಅವಾರ್ಡ್ ಕೊಡಬೇಕು…ಯಾವ ರೀತಿ ಕಾರ್ಯಕ್ರಮ ಇರಬೇಕು ಎಂಬಿತ್ಯಾದಿ ವಿಷಯಗಳನ್ನು ತೀರ್ಮಾನಿಸುವವರು ನಮ್ಮ ಓದುಗರಾಗಿದ್ದೀರಿ.
2016-17ನೇ ಸಾಲಿನಲ್ಲಿ ಮೊದಲ ವರ್ಷದ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಪ್ರಥಮ ಪ್ರಯತ್ನದಲ್ಲೇ ನಿರೀಕ್ಷೆಗೆ ಮೀರಿದ ಯಶ್ಸನ್ನು ನಮ್ಮ ಓದುಗರು ತಂದು ಕೊಟ್ಟರು. ಆ ಬಾರಿ ಕೇವಲ ನಿರೂಪಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿತ್ತು.
ಕರ್ನಾಟಕದ ಫೇವರೇಟ್ ಆ್ಯಂಕರ್ ಅವಾರ್ಡ್ ಎಂಬ ಹೆಸರಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಅದಾಗಿತ್ತು. ಜನ ಫೇಸ್ ಬುಕ್ ನಲ್ಲಿ ಮತ ಹಾಕಿ ನೆಚ್ಚಿನ ನಿರೂಪಕ, ನಿರೂಪಕಿಯನ್ನು ಆಯ್ಕೆ ಮಾಡಿದ್ದರು. ಅಂದು ಬಿಟಿವಿಯಲ್ಲಿದ್ದ ಚಂದನ್ ಶರ್ಮಾ ಅವರು ನಿರೂಪಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಈಗ ಚಂದನ್ ಶರ್ಮಾ ಅವರು ಪವರ್ ಟಿವಿ ಎಂಬ ಹೊಸ ಸುದ್ದಿವಾಹಿನಿಯಲ್ಲಿ ಎಕ್ಸಿಕ್ಯೂಟಿವ್ ಎಡಿಟರ್ ಆಗಿ ವಾಹಿನಿಯನ್ನು ಮುನ್ನಡೆಸುತ್ತಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ಸುದ್ದಿವಾಹಿನಿಯ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುತ್ತಿರುವ ಹಿರಿಮೆ ಚಂದನ್ ಶರ್ಮಾ ಅವರದ್ದಾಗಿದೆ.
ನಿರೂಪಕರ ವಿಭಾಗದಲ್ಲಿ ಸೋಮಣ್ಣ ಮಾಚಿಮಾಡ ದ್ವಿತೀಯ ಸ್ಥಾನ ಪಡೆದಿದ್ದರು. ಅಂದು ಈ-ಟಿವಿಯಲ್ಲಿದ್ದ ಸೋಮಣ್ಣ ಅವರು ಹೊಸದಾಗಿ ಆರಂಭಕ್ಕೆ ಸಿದ್ಧವಾಗಿರುವ, ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಫಸ್ಟ್ ನ್ಯೂಸ್ ಚಾನಲ್ ನಲ್ಲಿ ಮೆಟ್ರೋ ವಿಭಾಗದ ಮುಖ್ಯಸ್ಥರಾಗಿ ಹಾಗೂ ಆ್ಯಂಕರ್ ವಿಭಾಗದ ಮುಖ್ಯಸ್ಥರಾಗಿಯೂ ಜವಬ್ದಾರಿ ಹೊತ್ತಿದ್ದಾರೆ.
ನಿರೂಪಕಿಯರ ವಿಭಾಗದಲ್ಲಿ ಟಿವಿ9ನ ಸುಕನ್ಯಾ ಸಂಪತ್ ಪ್ರಥಮ ಸ್ಥಾನವನ್ನು ಪಡೆದಿದ್ದರು. ಅವರು ಕಳೆದ ಬಾರಿ ಅಂದರೆ 2ನೇ ವರ್ಷವೂ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು. ಟಿವಿ9 ಸುಕನ್ಯಾ ಎಂದೇ ಮನೆ ಮಾತಾಗಿರುವ ಸುಕನ್ಯಾ ಅವರು ಇಂದೂ ಕೂಡ ಅದೇ ಸಂಸ್ಥೆಯಲ್ಲಿದ್ದಾರೆ. ಸುಕನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಿರೂಪಕರು ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ. ನಿರೂಪಕಿಯರ ವಿಭಾಗದಲ್ಲಿ ಅಂದು ಈ ಟಿವಿಯಲ್ಲಿದ್ದ ಜಾಹ್ನವಿ ಮಹಡಿ ಅವರು ದ್ವಿತೀಯ ಸ್ಥಾನ ಮಾಡಿದ್ದರು. ಜನಪ್ರಿಯ ನಿರೂಪಕಿ ಜಾಹ್ನವಿ ಮಹಡಿ ಅವರು ಈಗ ಹೊಸದಾಗಿ ಆರಂಭವಾಗಲಿರುವ ಫಸ್ಟ್ ನ್ಯೂಸ್ ಬಳಗದಲ್ಲಿದ್ದಾರೆ.
ಮೊದಲ ವರ್ಷದ ಭಾರಿ ಯಶಸ್ಸಿನ ಸ್ಫೂರ್ತಿಯಿಂದ ಎರಡನೇ ವರ್ಷ ಅಂದರೆ 2017- 18ನೇ ಸಾಲಿನಲ್ಲಿ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ಎನ್ನುವ ಹೆಸರನೊಂದಿಗೆ ಕಾರ್ಯಕ್ರಮ ನಡೆಸಿದೆವು. ನಿರೂಪಕರಿಗೆ ಮಾತ್ರವಲ್ಲದೆ ರಿಪೋರ್ಟರ್, ಕ್ಯಾಮರಮನ್ , ವಾಯ್ಸ್ ವೋವರ್ ಆರ್ಟಿಸ್ಟ್, ವಿಡಿಯೋ ಎಡಿಟರ್ ಗಳಿಗೂ ಪ್ರಶಸ್ತಿ ನೀಡಲಾಯಿತು. ಜೊತೆಗೆ ಸಿನಿಮಾ, ಪೊಲಿಟಿಕಲ್, ಕ್ರೈಂ, ಸ್ಪೋರ್ಟ್ಸ್ ಬೆಸ್ಟ್ ಇನ್ವೆಸ್ಟಿಗೇಟಿವ್ ರಿಪೋರ್ಟಿಂಗ್ ಗೂ ಪ್ರಶಸ್ತಿ ನೀಡಿ ಗೌರವಿಸಿದ್ವಿ.
ಅದಲ್ಲದೆ ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ಸುವರ್ಣ ನ್ಯೂಸ್ ನ ಪ್ರಸಕ್ತ ವಿದ್ಯಮಾನಗಳ ವಿಭಾಗದ ಮುಖ್ಯಸ್ಥರು, ಜನಪ್ರಿಯ ನಿರೂಪಕರು , ಕಂಚಿನ ಕಂಠದ ಖಡಕ್ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಹಾಗೂ ಟಿವಿ9 ನ ಜನಪ್ರಿಯ ನಿರೂಪಕಿ,ಮಾಧ್ಯಮ ವಿಭಾಗದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಖ್ಯಾತ ಪತ್ರಕರ್ತೆ ರಾಧಿಕಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರೂಪಕರ ವಿಭಾಗದಲ್ಲಿ ಟಿವಿ9 ನ ಮಾಲ್ತೇಶ್ ಅವರು ಪ್ರಥಮ ಸ್ಥಾನವನ್ನು, ಟಿವಿ5 ನ ರಾಘವ ಸೂರ್ಯ ಅವರು ಎರಡನೇ ಸ್ಥಾನವನ್ನು ಪಡೆದರು. ನಿರೂಪಕಿಯರ ವಿಭಾಗದಲ್ಲಿ ಸತತ ಎರಡನೇ ಬಾರಿಯೂ ಟಿವಿ9 ಸುಕನ್ಯಾ ಅವರೇ ಪ್ರಥಮಸ್ಥಾನ ಪಡೆದರು. ಬಿಟಿವಿಯ ಶ್ರುತಿ ಗೌಡ ದ್ವಿತೀಯ ಸ್ಥಾನಕ್ಕೆ ಭಾಜನರಾದರು.
ಒಟ್ಟಾರೆಯಾಗಿ 2017-18ನೇ ಸಾಲಿನಲ್ಲಿ ಯಾರೆಲ್ಲಾ ಪ್ರಶಸ್ತಿ ಪಡೆದಿದ್ದರು ಎನ್ನುವ ಲೀಸ್ಟ್ ಇಲ್ಲಿದೆ.
ಟಿಎನ್ಐಟಿಮೀಡಿಯಾಅವಾರ್ಡ್ಸ್ 2017-18
ಬೆಸ್ಟ್ಆ್ಯಂಕರ್
(ಪುರುಷರವಿಭಾಗ)
1) ಮಾಲ್ತೇಶ್ ಟಿವಿ9
2) ರಾಘವಸೂರ್ಯ ಟಿವಿ5
(ಮಹಿಳಾವಿಭಾಗ)
1) ಸುಕನ್ಯಾ- ಟಿವಿ9
2) ಶ್ರುತಿಗೌಡ ಬಿಟಿವಿ
ಬೆಸ್ಟ್ರಿಪೋರ್ಟರ್
(ಪುರುಷರವಿಭಾಗ)
1) ಮಾರುತಿ -ದಿಗ್ವಿಜಯ
2) ಪ್ರಸನ್ನ -ಬಿಟಿವಿ
(ಮಹಿಳಾವಿಭಾಗ)
1)ಸೌಮ್ಯಕಳಸನ್ಯೂಸ್ 18
2 ) ಮಮತಸುವರ್ಣ
ಕ್ಯಾಮರಮನ್
(ಪುರುಷರವಿಭಾಗ)
1) ಅಜೀಜ್ಭಾಷ TV5
2) ದಿವಾಕರ್ದಿಗ್ವಿಜಯ
ವಾಯ್ಸ್ವೋವರ್
(ಪುರುಷರವಿಭಾಗ)
1) ರಾಜೇಶ್ ಶೆಟ್ಟಿ -ಟಿವಿ9
2) ದಾಮೋದರ್ ದಾಂಡೋಲೆ- ದಿಗ್ವಿಜಯ
(ಮಹಿಳಾವಿಭಾಗ)
1) ಪ್ರೀತಿ -ಪ್ರಜಾ
2) ಸ್ನೇಹ – ರಾಜ್ ನ್ಯೂಸ್
ವೀಡಿಯೋಎಡಿಟರ್
(ಪುರುಷರವಿಭಾಗ)
1) ಸೋಮಶೇಖರಪ್ಪನ್ಯೂಸ್ 18
2) ಧನಂಜಯ್ – ಸುವರ್ಣ ನ್ಯೂಸ್
(ಮಹಿಳಾವಿಭಾಗ)
1) ನಂದಸುವರ್ಣನ್ಯೂಸ್
2) ಶರ್ಮಿಳಾಟಿವಿ 5
1)ಸಿನಿಮಾರಿಪೋರ್ಟರ್ – ಸುಗುಣ , ಸುವರ್ಣನ್ಯೂಸ್
2) ಪೊಲಿಟಿಕಲ್ ರಿಪೋರ್ಟರ್ ಆನಂದ್ ಬೈದನಮನೆ -ಸುವರ್ಣನ್ಯೂಸ್
3) ಕ್ರೈಂರಿಪೋರ್ಟರ್ – ಅಭಿಷೇಕ್ ಶಂಕರ್ , TV5
4) ಸ್ಪೋರ್ಟ್ಸ್ ರಿಪೋರ್ಟರ್ ಸುಮ- ದಿಗ್ವಿಜಯ
5) ಬೆಸ್ಟ್ಇನ್ವೆಸ್ಟಿಗೇಟಿವ್ ರಿಪೋರ್ಟರ್ – ವಿಜಯಲಕ್ಷ್ಮಿ ಶಿಬರೂರು – ನ್ಯೂಸ್ 18
6) ಆಲ್ರೌಂಡರ್ ಇನ್ಎಲೆಕ್ಟ್ರಾನಿಕ್ಮೀಡಿಯಾ (ಮೇಲ್) – ಜಯಪ್ರಕಾಶ್ ಶೆಟ್ಟಿ – ಸುವರ್ಣನ್ಯೂಸ್
7) ಆಲ್ರೌಂಡರ್ ಇನ್ಎಲೆಕ್ಟ್ರಾನಿಕ್ ಮೀಡಿಯಾ (ಫಿಮೇಲ್ )- ರಾಧಿಕ ,TV9
ಈ ಬಾರಿಯು ಇದೇ ರೀತಿ ಮಾಧ್ಯಮದ ವಿವಿಧ ವಿಭಾಗಳಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಎರಡು ವರ್ಷಕ್ಕಿಂತ ದೊಡ್ಡಮಟ್ಟಲ್ಲಿ ಕಾರ್ಯಕ್ರಮ ಮಾಡುವ ಯೋಜನೆ ನಮ್ಮದು.
ಮುಖ್ಯವಾಗಿ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಂದು ಟೆಲಿವಿಷನ್ ವಾಹಿನಿಗಳು ಪ್ರಮುಖ ಪಾತ್ರವಹಿಸಿವೆ. ಇನ್ನುಳಿದ ಮಾಹಿತಿಗಳನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ.