ಒಬ್ಬನನ್ನು ಮದುವೆಯಾಗಲು‌ ಮೂವರು ಯುವತಿಯರ ಕಿತ್ತಾಟ…!

admin
By admin
1 Min Read

ಯುವಕನೊಬ್ಬನನ್ನು ಮದುವೆಯಾಗಲು ಮೂವರು ಯುವತಿಯರು ಪೊಲೀಸ್ ಠಾಣೆಯಲ್ಲೇ ಕಿತ್ತಾಡಿ, ಹೈಡ್ರಾಮ ನಡೆಸಿದ ಘಟನೆ ಉತ್ತರ ಪ್ರದೇಶದ ಗೌತಮ್ ಬಂದ್ ನಗರದಲ್ಲಿ ನಡೆದಿದೆ.


ಮುಲ್ ರೂಪದ ಬುಲಂದ್ ನಗರದ ಹಳ್ಳಿಯೊಂದರ ಯುವಕ ಸೆಕ್ಟರ್ 2 ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಮೊದಲು ಬುಲಂದ್ ನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಕೆಲಸಕ್ಕೆ ಬರುವ ಮುನ್ನ ಈ ಯುವತಿಯನ್ನು ಪ್ರೀತಿಸುತ್ತಿದ್ದ ಈತ…ಇದೇ ನಗರದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದೆಹಲಿಯ ತ್ರಿಲೋಕಪುರಿಯ ನಿವಾಸಿ, ತನ್ನ ಸಹೋದ್ಯೋಗಿಯನ್ನು ಪ್ರೀತಿಸಲು ಶುರುಮಾಡಿ, ಅವಳ‌‌ ಜೊತೆ 7 ವರ್ಷ ಲೀವ್ ಇನ್ ರಿಲೇಶನ್ ನಲ್ಲಿದ್ದ. 2017ರಲ್ಲಿ ಮತ್ತೊಬ್ಬಳನ್ನು ತನ್ನ ಪ್ರೀತಿ ಬಲೆಗೆ ಹಾಕಿಕೊಂಡಿದ್ದ. ಇವನ ಈ ಕಳ್ಳಾಟವನ್ನು ಸ್ನೇಹಿತ ಈ ಮೂವರು‌ ಯುವತಿಯರಿಗೆ ತಿಳಿಸಿ ಬಣ್ಣ ಬಯಲು ‌ಮಾಡಿದ್ದಾನೆ. ಪೊಲೀಸರು ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಮೂವರು ಯುವತಿಯರೂ ಸಹ ಠಾಣೆಗೆ ಬಂದಿದ್ದಾರೆ. ತಾವು ಅವನನ್ನೇ ಮದುವೆಯಾಗುವುದಾಗಿ ಮೂವರ‌ ನಡುವೆ ಜಗಳವಾಗಿದೆ. ಯುವಕ ಒಬ್ಬಾಕೆಯನ್ನು ನಿರಾಕರಿಸಿದಾಗ ಆಕೆ ತನ್ನ ಕೈ ಕಟ್ ಮಾಡಿಕೊಳ್ಳಲು ಯತ್ನಿಸಿದ್ದಾಳೆ.‌ ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ‌ ಚಿಕಿತ್ಸೆ‌ ಕೊಡಿಸಲಾಗಿದೆ‌. ಶಾಂತಿ ಉಲ್ಲಂಘನೆ ಪ್ರಕರಣದಡಿ ಯುವಕ‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Share This Article