- ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಅಭ್ಯರ್ಥಿ ಸುಮಲತಾ ಆರಂಭಿಕ ಮುನ್ನಡೆ ಕಂಡರು
ನಂತರ ನಿಖಿಲ್ ಕುಮಾರ ಸ್ವಾಮಿ 2 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು ಆದ್ರೀಗ ಸುಮಲತಾ ಮತ್ತೆ ಮುನ್ನಡೆ ಸಾಧಿಸಿದ್ದು
ಇಬ್ಬರ ನಡುವೆ ತೀರಾ ಪೈಪೋಟಿ ಏರ್ಪಟ್ಟಿದೆ, ಆದ್ರೆ ದುರಂತ ಅಂದ್ರೆ ಸಮಲತಾ ಹಿನ್ನಡೆಗೆ ಕಾರಣವಾಗಿದ್ದು ಮೂವರು ಸುಮಲತಾಗಳು ಎಂದು ಹೇಳಲಾಗುತ್ತಿದ್ದು ಸುಮಲತಾ ಪಾಲಿನ ವೋಟ್ ಗಳನ್ನು ಮೂವರು ಸಮಲತಾ ಪಾಲಾಗಿರುವ ಸಾಧ್ಯತೆ ಇದೆ.
ಕೆಲವೆ ಅಂತರಗಳ ನಡುವೆ ನಿಖಿಲ್ ಮತ್ತು ಸುಮಲತಾ ನಡುವೆ ಪೈಪೋಟಿ ನಡೆಯುತ್ತಿದೆ. ಬೆಳಗ್ಗೆಯಿಂದ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್ ಗೆ ಈಗ ಹಿನ್ನಡೆಯಾಗಿದೆ.
1300 ಮತಗಳ ಅಂತರದಲ್ಲಿ ಸುಮಲತಾ ಮತ್ತೆ ಮುನ್ನಡೆ ಸಾಧಿಸಿದ್ದಾರೆ, ಒಟ್ಟಾರೆ ಮಂಡ್ಯದಲ್ಲಿ ಇನ್ನು ಹಾವು ಏಣಿ ಆಟ ಮುಂದುವರೆದಿದೆ ಎಂದು ಹೇಳಬಹುದು.