ಶೇ 30 ರಷ್ಟು ವೇತನವನ್ನೊಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಬಂದ್ ಇದೀಗ ಬುಧವಾರವೂ ಮುಂದುವರೆದಿದ್ದು, ಪ್ರಯಾಣಿಕರು ಸತತ ಮೂರು ದಿನಗಳಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ವೇಳೆ ವೇತನ ಹೆಚ್ಚಳ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿನ ಜನರ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದೆ.
ಆದರೆ ಸಾರಿಗೆ ನೌಕರರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯರ್ಶಿಗಳು ಪತ್ಯೇಕವಾಗಿ ಸಭೆ ನಡೆಸಿ ಮಾತುಕತೆ ಮಾಡಲಿ ಆನಂತರವೇ ಕರ್ತವ್ಯಕ್ಕೆ ಹಾಜರಾಗುವುದಾಗಿ ಹೇಳದ್ದಾರೆ. ಪ್ರಯಾಣಿಕರಿಗೆ ತೊಂದರೆ ಉಂಟಾಗಬಾರದೆಂದು ಸರ್ಕಾರ ಟ್ರೈನಿ ಡ್ರೈವರ್‍ಗಳಿಂದ ಪೊಲೀಸರ ಭದ್ರತೆಯಲ್ಲಿ ಬಸ್ ಸಂಚಾರಕ್ಕೆ ನೆನ್ನೆ ಮಧ್ಯಾಹ್ನದಿಂದ ಅನುಮತಿ ನೀಡಿದರೂ ಅಲ್ಲಲ್ಲಿ ನೌಕರರು ಗಲಬೆ ಎಬ್ಬಿಸಿ ಟ್ರೈನೀ ಚಾಲಕರ ಮೇಲೆ ಹಲ್ಲೆನಡೆಸಿದ ಘಟನೆಯೂ ಆಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಬಸ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಕರ್ತವ್ಯ ಲೋಪದ ಆರೋಪದ ಮೇಲೆ ಮಂಗಳವಾರ ಚಿಕ್ಕಮಗಳೂರಿನಲ್ಲಿ ಐವರು ಚಾಲಕರೂ ಹಾಗೂ ನಿರ್ವಾಹಕರನ್ನು ವಜಾ ಮಾಡಲಾಗಿದೆ. ಹಾಗೆಯೇ 10 ಖಾಯಂ ನೌಕರರನ್ನು ಅಮಾನತುಗಳಿಸಲಾಗಿದೆ.
ಮುಖ ಮುಚ್ಚಿಕೊಂಡು ಕೆಲಸ ಮಾಡಿದ ಡ್ರೈವರ್‍ಗಳು.
ತರಬೇತಿ ನಿರತ ಚಾಲಕರು ಹಾಗೂ ನಿರ್ವಾಹಕರು ಸರ್ಕಾರದ ಆದೇಶದ ಮೇರೆಗೆ ಕೆಲಸಕ್ಕೆ ಹಾಜರಾಗಿದ್ದು ಮಾಧ್ಯಮಗಳಿಂದ ರಕ್ಷಿಸಿಕೊಳ್ಳಲು ಮುಖ ಮುಚ್ಚಿಕೊಂಡು ಕೆಲಸ ನಿರ್ವಹಿಸಿದ್ರು. ಈ ವೇಳೆ ಬಸ್ ತಡೆಯಲು ಯತ್ನಿಸಿದ್ದ ಸಿಬ್ಬಂದಿಯನ್ನು ಪ್ರಯಾಣಿಕರೇ ತರಾಟೆಗೆ ತೆಗೆದುಕೊಂಡ ಘಟನೆ ಮೆಜೆಸ್ಟಿಕ್‍ನಲ್ಲಿ ನಡೆದಿದೆ.
POPULAR STORIES :
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!