ಕೆಮ್ಮು, ಶೀತ ಗುಣಪಡಿಸಲು 4ತಿಂಗಳ ಹೆಣ್ಣುಮಗುವಿಗೆ ಕಬ್ಬಿಣದ ರಾಡ್ ನಿಂದ ಬರೆ ಹಾಕಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೇಲಿ ನಡೆದಿದೆ.
ಜಿಲ್ಲೆಯ ರಾಮಾ ಖೇದಾ ಎಂಬ ಗ್ರಾಮದ 4 ತಿಂಗಳ ಮಗು ಚಿಕಿತ್ಸೆ ಹೆಸರಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದೆ.
ನಾಲ್ಕು ದಿನದ ಹಿಂದೆ ಮಗಿವಿಗೆ ಬರೆ ಹಾಕಲಾಗಿದ್ದು, ವೈದ್ಯರ ಬಳಿ ಕರೆದುಕೊಂಡ ಹೋದ ಬಳಿಕ ವಿಷಯ ಬಯಲಾಗಿದೆ. ಬರೆ ಹಾಕಿದ ಮೇಲೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿತ್ತು. ಈ ಮಗು ನ್ಯುಮೋನಿಯಾ ಮತ್ತು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ.