ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ 40% ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಬೆಂಗಳೂರು ಹೈಕೋರ್ಟ್ ಪೀಠವು 45 ದಿನ ಡೆಡ್ಲೈನ್ ನೀಡಿದೆ. ಅಕ್ರಮವಿಲ್ಲದ ಕಾಮಗಾರಿಗಳಿಗೆ ಶೇ.75ರಷ್ಟು ಬಿಲ್ ಪಾವತಿಸಲಾಗುವುದು. ಆರೋಪಗಳಿರುವ ಗುತ್ತಿಗೆದಾರರಿಗೆ ಶೇ.50ರಷ್ಟು ಬಿಲ್ ಪಾವತಿಸಲಾಗುವುದು ಎಂದು ಹೈಕೋರ್ಟ್ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದು,
ನ್ಯಾ.ನಾಗಮೋಹನದಾಸ್ ಆಯೋಗದ ತನಿಖೆಗೆ ಕಾಲಾವಕಾಶ ನೀಡಲು ಮನವಿ ಮಾಡಿದರು. ಆದ್ರೆ, 45 ದಿನಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ವರದಿ ನೀಡಲು ಸೂಚನೆ ನೀಡಿರುವ ಹೈಕೋರ್ಟ್, ಸಂಬಂಧಪಟ್ಟ ದಾಖಲೆ ಪರಿಶೀಲಿಸಿ, ಅಹವಾಲು ಆಲಿಸಬೇಕು ಎಂದು ತಿಳಿಸಿ. ಫೆಬ್ರವರಿ 6ಕ್ಕೆ ವಿಚಾರಣೆ ನಿಗದಿಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.
40% ಹಗರಣ ವರದಿಗೆ ಡೆಡ್ ಲೈನ್ !
Date: