4ಜಿ ಜಮಾನ ಕಂಡಾಯ್ತು.. ಈಗ 5ಜಿ ಜಮಾನದ ಆರಂಭ..! 5ಜಿ ನೆಟ್ವರ್ಕ್ ಸೇವೆ ಆರಂಭವಾಗಿಯೇ ಬಿಟ್ಟಿದೆ. 5 ಜಿ ನೆಟ್ ವರ್ಕ್ ಈಗ ಎಲ್ಲಿ ಸಿಗುತ್ತೆ?
5 ಜಿ ನೆಟ್ವರ್ಕ್ ಹಾಗೂ ಬ್ರಾಡ್ಬ್ಯಾಂಡ್ ಗಿಗಾ ಬೈಟ್ ನೆಟ್ವರ್ಕ್ ಹೊಂದಿದ ಜಗತ್ತಿನ ಮೊದಲ ಜಿಲ್ಲೆಯಾಗಿ ಚೀನಾದ ಶಾಂಘೈ ಹೊರಹೊಮ್ಮಿದೆ. ಸ್ವತಃ ಶಾಂಘೈ ಈ ವಿಷಯವನ್ನು ಹೇಳಿಕೊಂಡಿದೆ. 5ಜಿ ಸೇವೆ ಮೂಲಕ ಟೆಕ್ನಾಲಜಿಯಲ್ಲಿ ಚೀನಾ ಅಮೆರಿಕಾವನ್ನೇ ಹಿಂದಿಕ್ಕಿ ಬಿಟ್ಟಿದೆ.
ಶಾಂಘೈ ಜಿಲ್ಲೆಯ ಹಾಂಗ್ಕೌ ಎಂಬಲ್ಲಿ 5 ಜಿ ಟೆಕ್ನಾಲಜಿಯನ್ನು ಸರ್ಕಾರಿ ಸೌಮ್ಯದ ಟೆಲಿಕಾಂ ಚೀನಾ ಮೊಬೈಲ್ ಒದಗಿಸಿದೆ. ಈ ಬಗ್ಗೆ ಚೀನಾ ಡೇಲಿ ವರದಿ ಮಾಡಿದೆ.
ವಿಶ್ವದ ಬಹುತೇಕ ಎಲ್ಲಾ ಭಾಗಗಳಲ್ಲೂ 4ಜಿ ನೆಟ್ವರ್ಕ್ ಸೇವೆ ಲಭ್ಯವಿದ್ದು, 5ಜಿ ಮುಂದುವರೆದ ಟೆಕ್ನಾಲಜಿಯಾಗಿದೆ.
5 ಜಿ ನೆಟ್ವರ್ಕ್ ಹೊಂದಿದ ವಿಶ್ವದ ಮೊದಲ ಜಿಲ್ಲೆ ಇದು..! ಯಾವ ದೇಶದಲ್ಲಿದೆ ಗೊತ್ತಾ?
Date: