ಖಾಸಗಿ ವೈದ್ಯರು ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೀತಿದೆ. ಖಾಸಗಿ ವೈದ್ಯರ ಪ್ರತಿಭಟನೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ..! ಸೂಕ್ತ ಚಿಕಿತ್ಸೆ ಸಿಗದೆ ಅನೇಕ ಸಾವುಗಳು ಸಂಭವಿಸಿವೆ. ಈ ನಡುವೆ ಯಾರ್ ಏನೇ ಮಾಡಿಕೊಳ್ಳಲಿ, ನಾನು ಮಾತ್ರ ನನ್ನ ಕೈಲಾದ ಮಟ್ಟಿಗೆ ರೋಗಿಗಳಿಗೆ ಚಿಕಿತ್ಸೆ ನೀಡ್ತೀನಿ ಅಂತ ಬಡ ರೋಗಿಗಳ ಪಾಲಿಗೆ ದೇವರಾಗಿದ್ದಾರೆ ಮಂಡ್ಯದ ಡಾ. ಶಂಕರೇಗೌಡ.
ಹೌದು 5 ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧರಾಗಿರೋ ಶಂಕರೇಗೌಡ ಅವರು ಮಂಡ್ಯದ ಸುಭಾಷ್ ನಗರದಲ್ಲಿ ತಾರಾ ಕ್ಲೀನಿಕ್ ನಡೆಸ್ತಿದ್ದಾರೆ. ಚರ್ಮ, ಕುಷ್ಠ ಮತ್ತು ಲೈಂಗಿಕ ರೋಗ ತಜ್ಞರಾಗಿರುವ ಇವರು ಅನೇಕ ವರ್ಷಗಳಿಂದ ಸೇವಾ ಶುಲ್ಕವನ್ನು 5 ರೂಪಾಯಿಗಿಂತ ಹೆಚ್ಚಿಸಿಲ್ಲ..! ಈಗ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ನನಗೂ ಅದಕ್ಕು ಸಂಬಂಧವಿಲ್ಲ, ನಾನು ನನ್ನ ನಂಬಿ ಬರೋ ರೋಗಿಗಳಿಗೆ ಚಿಕಿತ್ಸೆ ನೀಡಿಯೇ ಸಿದ್ಧ ಅಂತ ಸೇವೆಯಲ್ಲಿ ತೊಡಗಿದ್ದಾರೆ.
ಇವರು ಪ್ರತಿದಿನ ಮಂಡ್ಯದ ತಮ್ಮ ಕ್ಲೀನಿಕ್ ಗೆ ಬರುವ ಮೊದಲು ತನ್ನೂರು ಶಿವಳ್ಳಿಯ ಸರ್ಕಲ್‍ನಲ್ಲಿ ಜಗಲಿ ಮೇಲೆ ಕೂತ್ಕೊಂಡು ಚಿಕಿತ್ಸೆ ನೀಡ್ತಾರೆ.
ಸರ್ಕಾರ, ಖಾಸಗಿ ವೈದ್ಯರ ನಡುವಿನ ಪ್ರತಿಷ್ಠೆಯ ನಡುವೆ ಸೇವೆಯೇ ದೊಡ್ಡದು, ರೋಗಿಗಳ ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಸೇವೆ ಮಾಡ್ತಿರೋ ಇವರು ನಿಜಕ್ಕೂ ಗ್ರೇಟ್.